ಹೊಸದಿಲ್ಲಿ: ಖ್ಯಾತ ಪತ್ರಕರ್ತ ಹಾಗೂ ಬರಹಗಾರ ಅನಿಲ್ ಧಾರ್ಕರ್ ನಿಧನ

ಹೊಸದಿಲ್ಲಿ: ಖ್ಯಾತ ಪತ್ರಕರ್ತ ಹಾಗೂ ಬರಹಗಾರ, ಮುಂಬೈ ಅಂತರ್ ರಾಷ್ಟ್ರೀಯ ಸಾಹಿತ್ಯ ಉತ್ಸವದ ಸಂಸ್ಥಾಪಕ ಅನಿಲ್ ಧಾರ್ಕರ್ ಅವರು ಇಂದು (ಮಾ.26) ನಿಧನರಾಗಿದ್ದಾರೆ. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ.
ಓರ್ವ ಅಂಕಣಕಾರ, ಬರಹಗಾರರಾಗಿ, ವಾಸ್ತುಶಿಲ್ಪಿ, ಚಲನಚಿತ್ರ ಸೆನ್ಸಾರ್ ಮಂಡಳಿಯ ಸಲಹಾ ಸಮಿತಿಯ ಸದಸ್ಯ ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿ ಐದು ದಶಕಗಳಿಗೂ ಅಧಿಕ ಅವಧಿಯ ವೃತ್ತಿ ಜೀವನ ನಡೆಸಿದ್ದರು. ಇವರ ಅಂಕಣಗಳು ದೇಶ ಹಾಗೂ ವಿದೇಶಗಳಲ್ಲಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಮಿಡ್ ಡೇ ಹಾಗೂ ದಿ ಇಂಡಿಪೆಂಡೆಂಟ್ ಸೇರಿದಂತೆ ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಇವರು `ದಿ ರೋಮ್ಯಾನ್ಸ್ ಆಫ್ ಸಾಲ್ಟ್’ ನ ಲೇಖಕರಾಗಿದ್ದು, ದಕ್ಷಿಣ ಮುಂಬೈನಲ್ಲಿ ಆಕಾಶವಾಣಿ ಸಂಭಾಗಣವನ್ನು ಕಲಾಚಿತ್ರಮಂದಿರವಾಗಿ ರೂಪುಗೊಳ್ಳಲು ಇವರು ಪ್ರಮುಖ ಪಾತ್ರವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!