ಬೈಂದೂರು: ಕಾರು ಡಿಕ್ಕಿ – ಗೂಡ್ಸ್ ರಿಕ್ಷಾ ಚಾಲಕ ಮೃತ್ಯು
ಬೈಂದೂರು: ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಕೊಲ್ಲೂರು ಯಡ್ತರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದಾಸಪ್ಪ ಮೃತಪಟ್ಟವರು. ಇವರು ಗೂಡ್ಸ್ ರಿಕ್ಷಾ ಚಾಲಕರಾಗಿದ್ದು ಮಾ. 25 ರಂದು ಬೆಳಿಗ್ಗೆ ರಸ್ತೆಯಲ್ಲಿ ಬಾಡಿಗೆದಾರರನ್ನು ಕಾಯುತ್ತ ನಿಂತಿದ್ದರು. ಈ ವೇಳೆ ಕೊಲ್ಲೂರು ಕಡೆಯಿಂದ ಯಡ್ತರೆ ಕಡೆಗೆ ಅತೀವೇಗವಾಗಿ ಬಂದಿದ್ದ ಕಾರು ಚಾಲಕ ದಾಸಪ್ಪರವರಿಗೆ ಡಿಕ್ಕಿಹೊಡೆದು ಪರಾರಿಯಾಗಿದ್ದಾನೆ. ಪರಿಣಾಮ ದಾಸಪ್ಪ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ದಾಸಪ್ಪರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.