ಪೊಲೀಸ್ ಠಾಣೆಯ ಬಳಿಯ ನಾಲ್ಕು ಆಭರಣದಂಗಡಿ ದೋಚಿದ ಕಳ್ಳರು!
ಪುತ್ತೂರು: ಪೊಲೀಸ್ ಠಾಣೆಯ ಅಣತಿ ದೂರದಲ್ಲಿರುವ ನಾಲ್ಕು ಅಂಗಡಿಗಳಲ್ಲಿ ಕಳ್ಳರು ಒಂದೇ ದಿನ ಕಳ್ಳತನ ನಡೆಸಿರುವ ಘಟನೆ ಮಾ.24 ರ ತಡರಾತ್ರಿ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಪೊಲೀಸ್ ಠಾಣೆಯಿಂದ ಅಣತಿ ದೂರದಲ್ಲಿರುವ ಶ್ರೀಧರ ಭಟ್ ಜ್ಯುವೆಲ್ಲರ್ಸ್, ಕೋರ್ಟ್ ರಸ್ತೆಯ ಶ್ರೀ ನವಮಿ ಜ್ಯುವೆಲ್ಲರ್ಸ್, ತೃಪ್ತಿ ಜ್ಯುವೆಲ್ಲರ್ಸ್, ಹಿರಣ್ಯ ಜ್ಯುವೆಲ್ಲರ್ಸ್ ನಲ್ಲಿ ಕಳ್ಳತನ ನಡೆದಿದೆ. ಒಂದೇ ರಾತ್ರಿ ನಾಲ್ಕು ಚಿನ್ನಾಭರಣ ಅಂಗಡಿಗಳಿಗೆ ನುಗ್ಗಿರುವ ಕಳ್ಳರು ಬೆಳೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್ ತೆಗೆದು ಒಳಗಿನ ಸ್ಲೈಡ್ ಗೇಟ್ ನ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ಚಿನ್ನಾಭರಣ ಸಹಿತ ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.