ಮಾ.26 ರ ಬಳಿಕ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ – ವ್ಯವಹಾರಗಳಿಗೆ ಅಡಚಣೆ ಸಾಧ್ಯತೆ?
ನವದೆಹಲಿ: ಬ್ಯಾಂಕ್ ಗಳಿಗೆ ಮಾ.27 ರ ಬಳಿಕ ಸಾಲು ಸಾಲು ರಜೆಗಳು ಬರುತ್ತಿವೆ. ಹಾಗಾಗಿ ಸಾರ್ವಜನಿಕರು ಯಾವುದೇ ತಮ್ಮ ಬ್ಯಾಂಕ್ ವ್ಯವಹಾರಗಳಿದ್ದರೆ ಮಾ.26 ರ ಒಳಗೆ ಪೂರ್ಣಗೊಳಿಸುವುದು ಉತ್ತಮವಾಗಿದೆ. ಮಾ.26 ರ ಬಳಿಕ ಬ್ಯಾಂಕ್ಗಳಿಗೆ ಸಾಲು ಸಾಲು ರಜೆ ಸಿಕ್ಕಿದೆ. ಅದರಂತೆ ಮಾರ್ಚ್ 27 ನಾಲ್ಕನೇ ಶನಿವಾರ (ಬ್ಯಾಂಕ್ ರಜಾ ದಿನ), ಮಾರ್ಚ್ 28 ಭಾನುವಾರ (ರಜೆ), ಮಾರ್ಚ್ 31 ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಬ್ಯಾಂಕಿಗೆ ರಜೆ ಇಲ್ಲದಿದ್ದರೂ, ಗ್ರಾಹಕರ ಸೇವೆ ಬ್ಯಾಂಕಿನಲ್ಲಿ ಇರುವುದಿಲ್ಲ. ಇನ್ನು ಏಪ್ರಿಲ್ 1 ಬ್ಯಾಂಕಿನ ವಾರ್ಷಿಕ ಖಾತೆಯ ಮುಕ್ತಾಯ ವರ್ಷ, ಏಪ್ರಿಲ್ 2 ಗುಡ್ ಫ್ರೈಡೆ (ರಜೆ), ಏಪ್ರಿಲ್ 4 ಭಾನುವಾರ (ರಜೆ) ಆಗಿರುವುದರಿಂದ ಈ ರಜೆಗಳಿಂದ ಬ್ಯಾಂಕ್ ವ್ಯವಹಾರಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ.
ಹಾಗಾಗಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ಅಗತ್ಯ ಕೆಲಸಗಳಿದ್ದರೆ, ಇಂದು ಮತ್ತು ನಾಳೆಯೊಳಗೆ ಪೂರ್ಣಗೊಳಿಸಿಕೊಳ್ಳಿ. ಇಲ್ಲವಾದಲ್ಲಿ ಮುಂದಿನ ವಾರದ ವರೆಗೆ ಕಾಯಬೇಕಾಗುತ್ತದೆ. ಯಾಕೆರಂದರೆ ಮುಂದಿನ ವಾರ ಮಾರ್ಚ್ 29, 30 ಮತ್ತು ಏಪ್ರಿಲ್ 3 ರಂದು ಮಾತ್ರ ಬ್ಯಾಂಕ್ ಗಳಲ್ಲಿ ಗ್ರಾಹಕರ ಸೇವೆ ಇರುತ್ತದೆ. ಆದರೆ ಮಾರ್ಚ್ 30 ಮತ್ತು 31 ಆರ್ಥಿಕ ವರ್ಷದ ಕೊನೆಯ ದಿನವಾಗಿರುವುದರಿಂದ ಆ ಎರಡು ದಿನಗಳಲ್ಲಿ ಬ್ಯಾಂಕ್ ತನ್ನ ಆಂತರಿಕ ಕೆಲಸಗಳನ್ನು ನಿಭಾಯಿಸುತ್ತದೆ. ಆ ಎರಡು ದಿನಗಳಲ್ಲಿ ಗ್ರಾಹಕರ ಸೇವೆಗಳು ಬ್ಯಾಂಕಿನಲ್ಲಿ ಅಡ್ಡಿಯಾಗಬಹುದು.