ಯೂಟ್ಯೂಬ್‌ ನೋಡಿ ತಲೆ ಕೂದಲಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ನೇರಗೊಳಿಸಲು ಯತ್ನ- ಬಾಲಕ ಮೃತ್ಯು

ತಿರುವನಂತಪುರ: ಯೂಟ್ಯೂಬ್‌ ವಿಡಿಯೊವೊಂದನ್ನು ನೋಡಿಕೊಂಡು ಸೀಮೆಎಣ್ಣೆ ಮತ್ತು ಬೆಂಕಿಕಡ್ಡಿ ಬಳಸಿ ಕೂದಲನ್ನು ನೇರಗೊಳಿಸಲು ಯತ್ನಿಸಿದ 12 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಿರುವನಂತಪುರದ ವೆಂಗನೂರಿನಲ್ಲಿ ನಡೆದಿದೆ.

ಮೃತ ಬಾಲಕನನ್ನು ಶಿವನಾರಾಯಣನ್‌ ಎಂದು ಗುರುತಿಸಿಲಾಗಿದ್ದು, ಈತ ಏಳನೇ ತರಗತಿ ಓದುತ್ತಿದ್ದ ಎಂದು ಹೇಳಲಾಗಿದೆ.

ತನ್ನ ತಲೆ ಕೂದಲಿಗೆ ಸೀಮೆಎಣ್ಣೆ ಹಚ್ಚಿಕೊಂಡು ಬೆಂಕಿ ಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಯತ್ನಿಸಿದ ಬಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಸ್ನಾನ ಗೃಹದೊಳಗೆ ಈ ಕೃತ್ಯವನ್ನು ಪ್ರಯತ್ನಿಸಿರುವುದಾಗಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊಗಳನ್ನು ನೋಡುತ್ತಿದ್ದ ಬಾಲಕ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

ಸುಟ್ಟು ಗಾಯಗೊಂಡಿದ್ದ ಬಾಲಕನ್ನು ಆಸ್ಪತ್ರಗೆ ರವಾನಿಸುವ ವೇಳೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!