ಗಂಗೊಳ್ಳಿ: ಕೈ ಕುಯ್ದು, ನೇಣು ಬಿಗಿದು ಯುವಕ ಆತ್ಮಹತ್ಯೆ
ಗಂಗೊಳ್ಳಿ: ಕೈ ಕುಯ್ದುಕೊಂಡು, ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಶಿವರಾಜ್ ಪೂಜಾರಿ (26) ಆತ್ಮಹತ್ಯೆ ಮಾಡಿಕೊಂಡವ.
ಇವರು ಅವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ವಿಪರೀತ ಮದ್ಯಪಾನ ಮಾಡಿಕೊಂಡು ಮನೆಗೆ ತಡವಾಗಿ ಬರುತ್ತಿದ್ದರು. ಮಾ.23 ರಂದು ಮದ್ಯಪಾನ ಮಾಡಿದ ಅಮಲಿನಲ್ಲಿ ಜೀವನದಲ್ಲಿ ಮನನೊಂದು ತಮ್ಮ ಮನೆಯಲ್ಲಿ ಬ್ಲೇಡ್ನಿಂದ ಎಡ ಕೈ ರಕ್ತನಾಳವನ್ನು ಕೊಯ್ದುಕೊಂಡಿದ್ದು ಮಾತ್ರವಲ್ಲದೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.