ಉಡುಪಿ: ಗಾಂಜಾ ಮಾರಾಟ ಯತ್ನ, ಇಬ್ಬರ ಬಂಧನ
ಉಡುಪಿ(ಉಡುಪಿ ಟೈಮ್ಸ್ ವರದಿ): ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿಯ ಪೂತ್ತೂರು ಗ್ರಾಮದ ನಿಟ್ಟೂರು ಸಮೀಪ ನಡೆದಿದೆ. ಗೌತಮ್ ಮತ್ತು ವಿಜಿತ್ ಬಂಧಿತ ಆರೋಪಿಗಳು. ಬಂಧಿತರಿಂದ 4,500 ರೂ. ಮೌಲ್ಯದ 150 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ 720 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಗಾಂಜಾವನ್ನು ಮಂಗಳೂರಿನ ನವೀನ್ ಎಂಬಾತನಿಂದ ಮಾರಾಟದ ಸಲುವಾಗಿ ಖರೀದಿಸಿ ತಂದಿದ್ದಾಗಿ ತಿಳಿಸಿದ್ದಾರೆ. ಮಾ.22 ರಂದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ಗಾಂಜಾವನ್ನು ಮಾರಾಟ ಮಾಡಲು ನಿಂತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.