ಉಡುಪಿ: ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ 4.5ಲಕ್ಷ ರೂ. ಬಡ ಕುಟುಂಬಕ್ಕೆ ಹಸ್ತಾಂತರ
ಉಡುಪಿ: ದಿ. ಮಾಧವ ಆಚಾರ್ಯ ಅವರ ಸ್ಮರಣಾರ್ಥವಾಗಿ ಮಾ. 7 ರಂದು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ 4,50,000 ರೂ. ಮೊತ್ತವನ್ನು ದಿ. ಮಾಧವ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮಾ. 7 ಗುಂಡಿಬೈಲು ಪ್ರೀಮಿಯರ್ ಲೀಗ್ (ಜಿಪಿಎಲ್ ) ಗುರುಶ್ರೀ ಟ್ರೋಫಿ 2021 ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಪಂದ್ಯಾಟದ ಬಳಿಕ ಉಳಿದ 4,50,000 ರೂ. ಮೊತ್ತವನ್ನು ದಿ. ಮಾಧವ ಆಚಾರ್ಯ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಪ್ರಭಾಕರ ಪೂಜಾರಿ ಗುಂಡಿಬೈಲು, ಆರ್ ಕೆ ರಮೇಶ್ ಪೂಜಾರಿ ಗುಂಡಿಬೈಲು, ಬಾಲಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ, ಗಣೇಶ್ ಆಮೀನ್ ಗುಂಡಿಬೈಲು, ಸತೀಶ್ ಪುತ್ರನ್ ದೊಡ್ಡಣಗುಡ್ಡೆ, ಸಂತೋಷ್ ಶೆಟ್ಟಿ ಗುಂಡಿಬೈಲು ಮೊದಲಾದವರು ಉಪಸ್ಥಿತರಿದ್ದರು.