| ಉತ್ತರ ಪ್ರದೇಶ: ಶಸ್ತ್ರಚಿಕಿತ್ಸೆ ಅಂದರೇನೆ ಎಂತವರಿಗೂ ಭಯ ಹುಟ್ಟಿಸುತ್ತೆ. ಶಸ್ತ್ರ ಚಿಕಿತ್ಸೆ ಹೇಗಾಗುತ್ತೋ ಎನ್ನುವ ಭಯ ಒಂದೆಡೆಯಾದರೆ. ಆ ನಂತರದ ಆರೈಕೆ ಕುರಿತು ಏನಾಗುತ್ತೋ ಅನ್ನೋ ಭಯ ಮತ್ತೊಂದೆಡೆ. ಹೀಗಿರುವಾಗ ನಕಲಿ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡಿದರೆ ಹೇಗಾಗಬಹುದು. ಹಿಗೊಂದು ನಕಲಿ ವೈದ್ಯ ಶಸ್ತ್ರ ಚಿಕಿತ್ಸೆ ಮಾಡಿ ಎರಡು ಜೀವಗಳನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ. ಹೌದು ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಕೇವಲ 8ನೇ ತರಗತಿ ಓದಿದ್ದ ನಕಲಿ ವೈದ್ಯನೊಬ್ಬ ರೇಜರ್ ಬ್ಲೇಡ್ ನಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ್ದ ಪರಿಣಾಮ ತೀವ್ರ ರಕ್ತಸಾವ್ರವಾಗಿ ತಾಯಿ ಮಗು ಮೃತಪಟ್ಟ ಘಟನೆ ನಡೆದಿದೆ.
‘ರಾಜಾರಾಮ್ ಎಂಬವರ ಪತ್ನಿ ಪೂನಂ (35) ಎಂಬ ಮಹಿಳೆಗೆ ಗುರುವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೂಲಗಿತ್ತಿಯ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರು ದಿಹ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲು ತಿಳಿಸಿದ್ದಾರೆ. ಅದರೆ ಆಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ 140 ಕಿ.ಮೀ ದೂರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಲಾಗಿತ್ತು.ಅದರಂತೆ ದೀಹ ಗ್ರಾಮದಲ್ಲಿರುವ ಶಾರದಾ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ತಾಯಿ ಮಗು ಶಸ್ತ್ರಚಿಕಿತ್ಸೆಯ ವೇಳೆ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪತಿ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
| |