‘ದಿ ಗೇಮ್ ಇಸ್ ಓವರ್’: ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಮಮತಾ ಸೋದರಳಿಯಾ ಅಭಿಷೇಕ್ ಏಕ ಗವಾಕ್ಷಿಯಿದ್ದಂತೆ, ಅವರನ್ನು ದಾಟದೇ ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.

ಖರ್ಗಾಪುರದಲ್ಲಿ ನಡೆದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆ (ಶುಕ್ರವಾರ) ವ್ಯಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ 50-55 ನಿಮಿಷಗಳಷ್ಟು ಕಾಲ ಸ್ಥಗಿತಗೊಂಡಾಗ ಎಲ್ಲರೂ ಗಾಬರಿಗೊಳಗಾದರು. ಆದರೆ ಕಳೆದ 50-55 ವರ್ಷಗಳಿಂದ ಬಂಗಾಳದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. 

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭಿಯಾನದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಿಂದಿನ ಎಡರಂಗ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆದರೆ ಬಂಗಾಳದಲ್ಲಿ ಅಭಿವೃದ್ಧಿ ಹಾಗೂ ಕನಸುಗಳು ಕಳೆದ 50-55 ವರ್ಷಗಳಲ್ಲಿ ಕುಸಿಯುತ್ತಿವೆ. ಮೊದಲಿಗೆ ಕಾಂಗ್ರೆಸ್, ನಂತರ ಎಡರಂಗ ಮತ್ತು ಈಗ ಟಿಎಂಸಿ ರಾಜ್ಯದ ಅಭಿವೃದ್ಧಿಯನ್ನು ನಿಷ್ಕ್ರಿಯಗೊಳಿಸಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮತ್ತು ಎಡಪಂಥೀಯರ ವಿನಾಶವನ್ನು ನೀವು ನೋಡಿದ್ದೀರಿ. ಟಿಎಂಸಿ ನಿಮ್ಮ ಕನಸುಗಳನ್ನು ಹಾಳು ಮಾಡಿದೆ. ಕಳೆದ 70 ವರ್ಷಗಳಲ್ಲಿ ನೀವು ಎಲ್ಲರಿಗೂ ಅವಕಾಶ ನೀಡಿದ್ದೀರಿ. ಆದರೆ ನಮಗೊಂದು ಐದು ವರ್ಷಗಳ ಅವಕಾಶ ನೀಡಿ. ಬಂಗಾಳವನ್ನು 70 ವರ್ಷಗಳ ವಿನಾಶದಿಂದ ಮುಕ್ತಿಗೊಳಿಸಲಿದ್ದೇವೆ. ನಿಮಗಾಗಿ ನಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!