‘ಬಲೆ ತುಳು ಲಿಪಿ ಕಲ್ಪುಗ’ ಕಾರ್ಯಗಾರ ಸಮಾರೋಪ

ಕೊಡವೂರು: ಶಂಕರನಾರಾಯಣ ದೇವಸ್ಥಾನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ ಕೊಡವೂರು ಇವರ ಸಹಯೋಗದೊಂದಿಗೆ ಬಲೆ ತುಳು ಲಿಪಿ ಕಲ್ಪುಗ ಕಾರ್ಯಗಾರದ ಸಮಾರೋಪ ಸಮಾರಂಭ ದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ “ತುಲು ಲಿಪಿ ಇನ್ನಷ್ಟು ಆಧುನಿಕತೆ ತಂತ್ರಜ್ಞಾನಕ್ಕೆ ಬಂದು  ಪ್ರತಿ ಊರುಗಳಲ್ಲಿಯೂ ಪರಿಚಯ ಆಗುವಂತೆ ಆಗಬೇಕು , ಯುವಪೀಳಿಗೆ ತುಲು ಲಿಪಿಯನ್ನು ಮುಂದೆ ಕೊಂಡು ಹೋಗುವ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅಥಿತಿಯಾದ ಪ್ರಕಾಶ್ ಜಿ ಕೊಡವೂರು ಮಾತಾಡಿ . ” ತುಳು ಲಿಪಿ ತುಳು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ಜನರು ಇನ್ನಷ್ಟು ತುಳು ಲಿಪಿ ಕಲಿಯಬೇಕು ಎಂದು ಹೇಳಿದರು.

ಜೈ ತುಲುನಾಡ್ ವತಿಯಿಂದ ಕೊಡವೂರು ಶಾಲೆಯಲ್ಲಿ 36 ವರ್ಷ ಸೇವೆ ಮಾಡಿದ ಹಾಗೆಯೇ ಕೊಡವೂರು ಶಾಲೆಯಲ್ಲಿ ತುಲು ಲಿಪಿ ಬೆಳವಣಿಗೆಗೆ ನಿರಂತರವಾಗಿ ಬೆನ್ನೆಲುಬಾದ ಅಧ್ಯಾಪಕಿ ಮಲ್ಲಿಕಾ ದೇವಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಿಶೇಷ ವಿಚಾರವೆಂದರೆ ಕೊಡವೂರಿನಲ್ಲಿ ಅತೀ ಹೆಚ್ಚು ಮಂದಿ  ತುಳು ಲಿಪಿ ಕಲ್ತಿದ್ದಾರೆ, ಹಾಗೆ ತುಳು ಲಿಪಿ ಅಧ್ಯಾಪಕಿ ಕೂಡ ಇದ್ದಾರೆ ಸರಿ ಸುಮಾರು 300 ಜನ ಲಿಪಿ ಕಲಿಯುವ ಆಸಕ್ತಿ ತೋರಿಸಿರುವುದು ನಿಜಕ್ಕೂ ಶ್ಲಾಘನೀಯ.
ಇದೆ ಸಮಯದಲ್ಲಿ ಕಾರ್ಯಕ್ರಮ ದಲ್ಲಿ ತುಲು ಲಿಪಿ ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಈ ಕಾರ್ಯಕ್ರಮ ದಲ್ಲಿ ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ  ಪ್ರಕಾಶ್. ಜಿ ಕೊಡವೂರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ  ಅಧ್ಯಕ್ಷರಾದ ಡಾ. ಆಕಾಶ್ ರಾಜ್ ಜೈನ್, ,ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜನಾರ್ಧನ್ ಕೊಡವೂರು, ಯಶೋಧ ಕೇಶವ, ರಾಮ ಶೇರಿಗಾರ್,ಕೊಡವೂರು ಶಾಲಾ ಶಿಕ್ಷಕಿ ಮಲ್ಲಿಕಾ ದೇವಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ತಾರಾ ಉಮೇಶ್ ಆಚಾರ್ಯ,ಶರತ್ ಕೊಡವೂರು,ಸ್ವಾತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಜೈ ತುಲುನಾಡ್ ಸಂಘದ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಉಜ್ವಲ ಪೂಜಾರಿ ಉಪಸ್ಥಿತರಿದ್ದರು.

ರಾಜೇಶ್ ತುಳುವೆ ಸ್ವಾಗತ ಭಾಷಣ ನಡೆಸಿಕೊಟ್ಟರು ಬನಶ್ರೀ ಕಲ್ಮಾಡಿ ಧನ್ಯವಾದ ಗೈದರು, ಸ್ವಾತಿ ಸುವರ್ಣ ಮತ್ತು ರಮ್ಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು,ಸುಷ್ಮಾ ದೇವಾಡಿಗ ಕಾರ್ಯಕ್ರಮ ದ ನಿರೂಪಣೆ ಗೈದರು, ಶರತ್ ಕೊಡವೂರು ಪ್ರಾಸ್ತಾವಿಕ ಭಾಷಣ ಮಾಡಿದರು .

Leave a Reply

Your email address will not be published. Required fields are marked *

error: Content is protected !!