ರಾಸಲೀಲೆ ಸಿಡಿ ಪ್ರಕರಣ: ಸಂಚಿನ ಹಿಂದೆ ನಾಲ್ವರು ಮಾಜಿ ಪತ್ರಕರ್ತರ ಕೈವಾಡ?
ಬೆಂಗಳೂರು: ರಾಸಲೀಲೆ ಸಿಡಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಈ ಪ್ರಕರಣಕ್ಕೆ ದಿನಕಳೆದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು ಇದೀಗ ಸಿಡಿ ಸಂಚಿನ ಹಿಂದೆ ನಾಲ್ವರು ಮಾಜಿ ಪತ್ರಕರ್ತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿರುವ ಎಸ್ಐಟಿ ಮೊದಲ ದಿನದಿಂದಲೇ ತನಿಖೆ ಚುರುಕುಗೊಳಿಸಿದೆ. ಈ ವೇಳೆ ಸಿಡಿ ಸಂಚಿನ ಹಿಂದೆ ನಾಲ್ವರು ಮಾಜಿ ಪತ್ರಕರ್ತರ ಹೆಸರು ಕೇಳಿಬರುತ್ತಿದೆ. ಈ ಸಂಬಂಧ ಎಸ್ಐಟಿ ಕೆಲವರಿಗೆ ನೋಟಿಸ್ ನೀಡಿದೆ.
ಪ್ರಕರಣದಲ್ಲಿ ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್ ಗೌಡ ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವರದಿಯಾಗುತ್ತಿದೆ.
ಇನ್ನುಳಿದಂತೆ ವಿಜಯಪುರ ದೇವನಹಳ್ಳಿಯ ಮೂಲದ ಶ್ರವಣ್, ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ ಭವಿತ್ ದೋಣಗುಡಿಗೆ, ಬೀದರ್ ಭಾಲ್ಕಿ ಮೂಲದ ಆಕಾಶ್ ತಳವಾಡೆ ಮತ್ತು ಬೀದರ್ ಔರಾದ್ ಮೂಲದ ಸಾಗರ್ ಶಿಂಧೆ ಹೆಸರು ಕೇಳಿಬರುತ್ತಿದೆ.