ಪಿತ್ರೋಡಿ: ಹೊಳೆಯಲ್ಲಿ ನಾಪತ್ತೆಯಾಗಿದ್ದ ಬಂಟಕಲ್ಲಿನ ಯುವಕನ ಶವ ಪತ್ತೆ
ಉಡುಪಿ: ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉದ್ಯಾವರ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕ ಶವ ಇಂದು ಬೆಳಗ್ಗೆ ಪತ್ತೆಯಾಗಿ.
ಬಂಟಕಲ್ಲಿನ ಸುಮಂತ್ (22 ) ಎಂಬಾತ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟವ.
ಸಂಬಂಧಿ ಸಂತೋಷ್ ಕುಮಾರ್ ಜೊತೆಯಾಗಿ ಬಂದಿದ್ದ ಸುಮಂತ್ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಸೋಮವಾರ ಮಧ್ಯಾಹ್ನ ಕಪ್ಪೆ ಚಿಪ್ಪು ಹೆಕ್ಕಲು ನೀರಿಗಿಳಿದಿದ್ದರು. ನೀರಿನ ಸೆಳೆತಕ್ಕೆ ಸಿಕ್ಕಿ ಇಬ್ಬರು ಕೊಚ್ಚಿಹೋಗಿದ್ದರು. ಸಂತೋಷ್ ನೀರಿನ ಸೆಳೆತದಿಂದ ಬಚಾವಾಗಿದ್ದರು. ಆದರೆ ಸುಮಂತ್ ಕಣ್ಮರೆಯಾಗಿದ್ದರು.
ಇಂದು ಸ್ಥಳೀಯ ಮೀನುಗಾರರು ಹೊಳೆಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ, ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.