ಕುಂದಾಪುರ: ಐಎಂಎ ಮಾದರಿಯ ಗೋಲ್ಡ್ ಸ್ಕೀಂ ಹೆಸರಲ್ಲಿ ಕೋಟ್ಯಾಂತರ ರೂ. ಧೋಖಾ

ಕುಂದಾಪುರ( ಉಡುಪಿ ಟೈಮ್ಸ್ ವರದಿ): ಗೋಲ್ಡ್ ಸ್ಕೀಂ ಹೆಸರಲ್ಲಿ ಕೋಟ್ಯಾಂತರ ರೂ. ನಗ, ನಗದು ಲಪಟಾಯಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯ ಮಾಲಕ ಮತ್ತು ನೌಕರರಾದ ಕಂಡ್ಲೂರಿನ ಮೊಹಮ್ಮದ್ ಇಫ್ತಿಕಾರ್ ಜುಮ್ಮಿ, ಭಟ್ಕಳದ ಮೊಮಿನ್ ಯೂಸೂಫ್ ಆಲಿ, ಮೊಳಹಳ್ಳಿ ಗಣೇಶ್ ಶೆಟ್ಟಿ, ಭಟ್ಕಳದ ಖತೀಬ್ ಅಬ್ದುಲ್ ರೆಹಮಾನ್, ಬಿ.ಎಮ್ಜಾಫರ್, ಫರಾಜ್, ಆಸೀಫ್.ಕೆ, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಫ್, ಮೊಹಮ್ಮದ್ ನೂರೈಸ್,  ಎಸ್ಜೀನತ್, ಬೆಟ್ಟೆ ಬಾಷಾ, ಬೆಟ್ಟೆ ಅಕ್ಬರ್, ಬಶೀರ್ ಅಹ್ಮದ್, ಕೆ ಮುನೀರ್, ಅರ್ಫಾದ್ ಮೊಹಮ್ಮದ್,  ಮೊಹಮ್ಮದ್ ಪಾಮೀಝಾ, ಸರ್ದಾರ್ ನವೀದ್ ಅಕ್ತರ್, ನೌಶಾದ್,  ಮೊಹಮ್ಮದ್ ಫಾರೀಸ್, ಬಿ. ಭಾನು, ನಸೀಮಾ , ವಾಹೀದಾ ಪ್ರಕರಣದ ಆರೋಪಿಗಳು.

ಇವರು ಕುಂದಾಪುರದ ತಮ್ಮ ಸಂಸ್ಥೆಯ ಗ್ರಾಹಕರ ಬಳಿ ನಗದು  ಮತ್ತು  ಚಿನ್ನಾಭರಣದ ಸ್ಕೀಮ್  ಮೂಲಕ 1 ಲಕ್ಷ ರೂ. ಚಿನ್ನಾಭರಣ ಹೂಡಿಕೆ ಮಾಡಿದರೆ ತಿಂಗಳಿಗೆ ಚಿನ್ನದ  ಮಾರುಕಟ್ಟೆ ದರದ  ಮೇಲೆ ರೂ. 2000 ದಿಂದ ರೂ. 2500 ರಂತೆ  ಹಾಗೂ ನಗದು  1 ಲಕ್ಷ ನಗದು  ಹೂಡಿಕೆ ಮಾಡಿದರೆ ತಿಂಗಳಿಗೆ ರೂ. 2000 ದಿಂದ 3000 ನಂತೆ ಲಾಭಾಂಶವನ್ನು ನೀಡುವುದಾಗಿ ಹೇಳಿದ್ದರು. ಅದರಂತೆ ಇವರ ಮಾತನ್ನು ನಂಬಿದ ಕುಂದಾಪುರದ ಕಸಬಾ  ಗ್ರಾಮದ ಇರ್ಷಾದ್  ಗುಲ್ಜಾರ್ ಅವರು,  ರೂ 6,00,000 ನಗದು ಹಾಗೂ 31 ಗ್ರಾಂ ಚಿನ್ನ ಒಟ್ಟು ರೂ. 7,24,000 ಹಣವನ್ನು ಸ್ಕೀಮ್ ಮೂಲಕ  ಹೂಡಿಕೆ ಮಾಡಿದ್ದರು.

ಆದರೆ, ಆರೋಪಿಗಳು ಈ ಹಿಂದೆ ಹೇಳಿದಂತೆ  ಯಾವುದೇ ರೀತಿಯ ಲಾಭಾಂಶ ನೀಡಿಲ್ಲ ಅಲ್ಲದೆ. ಹೂಡಿಕೆ ಮಾಡಿದ ಹಣ ಮತ್ತು ಚಿನ್ನಾಭರಣವನ್ನು ವಾಪಾಸ್ಸು  ನೀಡದೇ ವಂಚಿಸಿದ್ದಾರೆ. ಅಲ್ಲದೆ ಇದೇ ರೀತಿ ಇತರ ಗ್ರಾಹಕರನ್ನೂ ನಂಬಿಸಿ 56,76,000 ರೂ. ಮೌಲ್ಯದ 1,419.188 ಗ್ರಾಂ ಚಿನ್ನಾಭರಣ , ರೂ. 35,88,000 ನಗದು ಸೇರಿ ಒಟ್ಟು 92,64,000 ರೂಪಾಯಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂತ್ರಸ್ಥರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!