ಕೇರಳ ವಿಧಾನ ಸಭಾ ಚುನಾವಣೆ: ಉಡುಪಿ ಬಿಜೆಪಿ ನಾಯಕರ ಬಿರುಸಿನ ಪ್ರಚಾರ
ಉಡುಪಿ(ಉಡುಪಿ ಟೈಮ್ಸ್ ವರದಿ): ಕೇರಳ ರಾಜ್ಯ ವಿಧಾನ ಸಭಾ ಚುನಾವಣೆಯ ಪೂರ್ವತಯಾರಿ ಬಿರುಸಿನಿಂದ ನಡೆಯುತ್ತಿದೆ. ಚುನಾವಣಾ ಪೂರ್ವಬಾವಿ ತಯಾರಿಗೆ ಉಡುಪಿ ನಗರ ಬಿಜೆಪಿಯ ಚುನಾವಣಾ ಸಂಯೋಜಕರ ತಂಡ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಅರನ್ಮುಲ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದೆ.
ಕೇರಳ ರಾಜ್ಯ ವಿಧಾನಸಭಾ ಚುನಾವಣಾ ಪೂರ್ವಭಾವಿ ತಯಾರಿಗೆ ಸಂಬಂಧ ಪಟ್ಟಂತೆ ಚುನಾವಣಾ ಸಂಯೋಜಕರುಗಳಾಗಿ ನೇಮಿಸಲ್ಪಟ್ಟ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಮತ್ತು ಸುವರ್ದನ್ ನಾಯಕ್ ಅವರು ಮಾ.14 ರಂದು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಅರನ್ಮುಲ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಮುದಾಯದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿದರು.
ಈ ವೇಳೆ ಜಿ.ಎಸ್.ಬಿ. ಸಮುದಾಯ ಹಾಗೂ ವಿವಿಧ ಸಮಾಜದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಿದರು.
ಈ ಸಂದರ್ಭ ಕ್ಷೇತ್ರದ ಅಭ್ಯರ್ಥಿ ಬಿಜು ಮ್ಯಾತ್ಯು, ಮಹಿಳಾ ಮೋರ್ಚಾ ಅಧ್ಯಕ್ಷೆ ದೀಬಾ ಜಿ ನಾಯರ್, ಕಾರ್ಯದರ್ಶಿ ಸಂಧ್ಯಾ, ಮಂಡಲ ಬಿಜೆಪಿ ಪ್ರದಾನ ಕಾರ್ಯದರ್ಶಿ ಸೂರಜ್ ಎಳಂತೂರು ಮೊದಲಾದವರು ಜೊತೆಗಿದ್ದರು.