ತಮಿಳುನಾಡು ಚುನಾವಣೆ: ಮಾಜಿ ಐಪಿಎಸ್ ಅಣ್ಣಾಮಲೈ, ಖುಷ್ಬೂಗೆ ಬಿಜೆಪಿ ಟಿಕೆಟ್ ಫೈನಲ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಸುಂದರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. 

ತಮಿಳುನಾಡಿನ 20 ವಿಧಾನಸಭೆ ಕ್ಷೇತ್ರಗಳಲ್ಲಿ ಬೊಜೆಪಿ ಸ್ಪರ್ಧಿಸುತ್ತಿದೆ. ಇದೀಗ ಒಟ್ಟೂ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು ಈ ಪೈಕಿ ಅಣ್ಣಾಮಲೈ ಹಾಗೂ ಖುಷ್ಬೂ ಹೆಸರಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು.

ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದಲೂ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ.

ಇನ್ನೊಂದೆಡೆ ಕಾರೈಕುಡಿ ಕ್ಷೇತ್ರದಿಂದ ಹೆಚ್. ರಾಜಾ ಹಾಗೂ ಧರ್ಮಪುರಂ ಕ್ಷೇತ್ರದಿಂದ ಮುರುಗನ್ ಕಣಕ್ಕಿಳಿಯಲಿದ್ದಾರೆ. 

Leave a Reply

Your email address will not be published. Required fields are marked *

error: Content is protected !!