ಪೌರಕಾರ್ಮಿಕರ ಮೇಲೆ ಹಲ್ಲೆ: ವ್ಯಾಪಕ ಖಂಡನೆ
ಉಡುಪಿ: ಪೌರಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ನಿಜಕ್ಕೂ ಆಘಾತಕಾರಿ ಮತ್ತು ಈ ಘಟನೆಯನ್ನು ಖಂಡಿಸುತ್ತೇನೆ, ನಗರದ ಸ್ವಚ್ಚತೆ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮವನ್ನು ಗೌರವಿಸಿ ಅವರಿಗೆ ಬೇಕಾಗಿರುವ ಸಂಪೂರ್ಣ ಭದ್ರತೆಯನ್ನು ನೀಡುವಂತೆ ಮತ್ತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಘಟನೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯವರಿಗೆ ಸೂಚಿಸಿದ್ದೇನೆ. ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು ಉಡುಪಿ
ಉಡುಪಿ ನಡು ರಸ್ತೆಯಲ್ಲಿ ನಗರಸಭೆಯ ಕಾರ್ಮಿಕನ ಮೇಲಿನ ಹಲ್ಲೆಯನ್ನು ವಿಶ್ವಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಈ ರೀತಿ ಸಾರ್ವಾಜನಿಕವಾಗಿ ಕಾನೂನು ಕೈಗೆತ್ತಿಗೊಂದು ಹಲ್ಲೆ ಮಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಸೂಕ್ತವಾದ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇನೆ.
ದಿನೇಶ್ ಮೆಂಡನ್ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಉಡುಪಿ ಜಿಲ್ಲೆ
ದಿನನಿತ್ಯ ನಗರದ ಸ್ವಚ್ಚತೆಗಾಗಿ ಮಳೆ ಗಾಳಿ, ಬೀಸಿಲೆನ್ನದೆ ದುಡಿಯುವ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದನ್ನು ಉಡುಪಿ ಜಿಲ್ಲಾ ಹಿಂದೂ ಯುವಸೇನೆ ಖಂಡಿಸುತ್ತದೆ. ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಂಡು, ಸಂತ್ರಸ್ತ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಮಂಜು ಕೊಳ ಹಿಂದೂ ಯುವಸೇನೆಯ ಜಿಲ್ಲಾಧ್ಯಕ್ಷರು
ಮೋಧಿಯವರ ಸ್ವಚ್ಛ ಭಾರತದ ಕನಸಿಗೆ ಪೂರಕವಾಗಿ, ಉಡುಪಿ ನಗರವನ್ನು ಸ್ವಚ್ಛವಾಗಿಡಲು ಅತೀ ಕಡಿಮೆ ವೇತನದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ನಮ್ಮ ಪೌರ ಕಾರ್ಮಿಕರ ಮೇಲೆ ಇಂದು ಉಡುಪಿಯ ಅಂಗಡಿ ಮಾಲ್ಹಿಕನೋರ್ವ ಹಲ್ಲೆ ಮಾಡಿರುವುದನ್ನು ಉಡುಪಿ ಜಿಲ್ಲಾ ಶ್ರೀ ರಾಮಸೇನೆಯು ತೀವ್ರವಾಗಿ ಖಂಡಿಸುತ್ತದೆ. ಇದೊಂದು ಹಿಂದುಗಳ ಮೇಲೆ ನಡೆದ ಹಲ್ಲೆ ಎಂದರೆ ತಪ್ಪಾಗಲಾರದು. ಹಲ್ಲೆ ಮಾಡಿದ ವ್ಯಕ್ತಿ ಯಾರೇ ಆದರೂ ಸರಕಾರ ಹಾಗೂ ಗೃಹ ಇಲಾಖೆ ಕೂಡಲೇ ಬಂದಿಸಬೇಕು. ಶ್ರೀರಾಮಸೇನೆಯು ಪೌರಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ, ತಪ್ಪಿತಸ್ಥರನ್ನು ಕೂಡಲೇ ಬಂದಿಸದಿದ್ದಲ್ಲಿ ಸಮಾನ ಮನಸ್ಕರನ್ನು ಜೊತೆಯಾಗಿಸಿಕೊಂಡು ಉಗ್ರವಾದ ಹೋರಾಟವನ್ನು ಮಾಡಲಿದ್ದೇವೆ.
ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು
ಉಡುಪಿ: ನಗರಸಭಾ ಸದಸ್ಯರು, ದಲಿತ ಮುಖಂಡರು ಪೊಲೀಸ್ ಠಾಣೆಗೆ ಭೇಟಿ
ಪೌರಕಾರ್ಮಿಕ ಸಂಜು ಮಾದರ್ ಹಲ್ಲೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುಂತೆ ಉಡುಪಿ ನಗರ ಸಭಾ ವಿಪಕ್ಷ ನಾಯಕ್ ರಮೇಶ್ ಕಾಂಚನ್, ದಲಿತ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಭಿರ್ತಿ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ವಿಜಯ್ ಪೂಜಾರಿ, ಯತೀಶ್ ಕರ್ಕೇರ, ಗಣೇಶ ದೊಡ್ಡಣಗುಡ್ಡೆ, ಗಣೇಶ್ ನೆರ್ಗಿ, ನಾರಾಯಣ್ ಕುಂದರ್, ಯಾದವ್ ಈ ಸಂದರ್ಭ ಉಪಸ್ಥಿತರಿದ್ದರು
ಉಡುಪಿಯಲ್ಲಿ ಪೌರಕಾರ್ಮಿಕನ ಮೇಲೆ ನಡೆದ ಹಲ್ಲೆಯನ್ನು ಜಿಲ್ಲೆಯ ಕೊರಗ ಸಂಘಟನೆಗಳು ತೀವ್ರ ಖಂಡಿಸುತ್ತದೆ.