ಉಡುಪಿ: ಸೆಕ್ಯೂರಿಟಿ ಗಾರ್ಡ್ ನಾಪತ್ತೆ
ಉಡುಪಿ: ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ನವೀನ ಉದಯ ಗುಡಿಗಾರ್ (33) ನಾಪತ್ತೆಯಾಗಿರುವ ವ್ಯಕ್ತಿ.
ಇವರು ಉಡುಪಿಯ ವಸತಿ ಸಮುಚ್ಚಯವೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು ಕೆಲಸ ಮುಗಿದ ಬಳಿಕ ಪ್ರತಿ ದಿನ ಮನೆಗೆ ಬಂದು ಹೋಗುತ್ತಿದ್ದರು. ಆದರೆ ಮಾ.8 ರಂದು ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಬರಬೇಕಾದವರು ವಾಪಾಸ್ಸು ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.