ದಕ್ಷಿಣ ವಲಯ ಜೂ. ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ – 2021: ರಾಜ್ಯಕ್ಕೆ 3 ಚಿನ್ನದ ಪದಕ
ಉಡುಪಿ: ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 32 ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2021 ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್ ಕ್ಲಬ್‍ನ ಯುವ ಕ್ರೀಡಾಪಟುಗಳು ಪ್ರಶಸ್ತಿ ಪುರಸ್ಕøತಗೊಂಡಿದ್ದಾರೆ.
ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯ ಸಿ.ಎಚ್. ಮೊಹಮ್ಮದ್ ಕೋಯಾ ಕ್ರೀಡಾಂಗಣದಲ್ಲಿ ಫೆಬ್ರವರಿ 26 ರಿಂದ 28 ರವರೆಗೆ ಈ ಚಾಂಪಿಯನ್‍ಶಿಪ್ ಮೀಟ್ 2021 ನಡೆದಿದ್ದು, ಈ ಚಾಂಪಿಯನ್ ಶಿಪ್ ಮಿಟ್‍ನಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ತರಬೇತುದಾರ ಶಾಲಿನಿ ರಾಜೇಶ್ ಶೆಟ್ಟಿಯವರ ಸಮರ್ಥ ಮಾರ್ಗದರ್ಶನದಲ್ಲಿ ಯುನೈಟೆಡ್ ಅಥ್ಲೆಟ್ಸ್ ಕ್ಲಬ್ ರಾಜ್ಯಕ್ಕೆ 3 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.
ಈ ಚಾಂಪಿಯನ್ ಶಿಪ್‍ನಲ್ಲಿ 60 ಮೀಟರ್ ಯು 14 ವಿಭಾಗದಲ್ಲಿ ಸಾನಿಕಾ ಬಂಗೇರಾ, ಶಾಟ್‍ಪುಟ್ ಯು 14 ವಿಭಾಗದಲ್ಲಿ ಅನುರಾಗ್ ಜಿ, ಶಾಟ್‍ಪುಟ್ ಯು 20 ವಿಭಾಗದಲ್ಲಿ ಪ್ರಜ್ವಲ್ ಎಂ ಶೆಟ್ಟಿ ಚಿನ್ನದ ಪದಕ ಗೆಲ್ಲುವ ಮೂಲಕ ಪ್ರಶಸ್ತಿ ಪುರಸ್ಕøತಗೊಂಡಿದ್ದಾರೆ. ಅಷ್ಟೇ ಅಲ್ಲದೆ ಯು 14 ಶಾಟ್ ಪುಟ್ ನಲ್ಲಿ 15.48 ಮೀಟರ್ ಎಸೆಯುವ ಮೂಲಕ ಅನುರಾಗ್ ಜಿ. ಹೊಸ ಮೀಟ್ ರೆಕಾರ್ಡ್ ರಚಿಸಿದ್ದಾರೆ ಎಂದು ತಿಳಿದು ಬಂದಿದೆ.