ಗೇರುಬೀಜ ಗಂಟಲಲ್ಲಿ ಸಿಲುಕಿ ಮೂರುವರೆ ವರ್ಷದ ಮಗು ಮೃತ್ಯು
ಪುತ್ತೂರು: ಗೋಡಂಬಿ ಬೀಜ ತಿನ್ನುವಾಗ ಗಂಟಲಲ್ಲಿ ಸಿಲುಕಿ ಬಾಲಕನೋರ್ವ ಮೃತಪಟ್ಟ ಘಟನೆ ಪುತ್ತೂರಿನ ಸಾಲ್ಮರ ಊರಮಾಲ್ ಎಂಬಲ್ಲಿ ಮಾ.10 ರಂದು ನಡೆದಿದೆ.
ಸಾಲ್ಮರದ ಉರಮಾಲ್ ನಿವಾಸಿ ಇಸಾಕ್ ಎಂಬವರ ಮೂರುವರೆ ವರ್ಷದ ಮಗು ಮೃತಪಟ್ಟ ಬಾಲಕ. ನಿನ್ನೆ ಈತ ಮನೆಯಲ್ಲಿ ಗೋಡಂಬಿ ತಿನ್ನುತ್ತಿದ್ದ ವೇಳೆ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿದೆ. ಈ ವೇಳೆ ಅಸ್ವಸ್ಥಗೊಂಡಿದ್ದ ಮಗುವನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.