ಮಾ.20-21: ಕೊಂಕಣಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಣಿಪಾಲ: ಕೊಂಕಣಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಣಿಪಾಲದ ಆರ್ ಎಸ್‍ಬಿ ಸಭಾಭವನದಲ್ಲಿ ಗುರುವಾರ ನಡೆಯಿತು.

ಖ್ಯಾತ ಉದ್ಯಮಿ ಪ್ರದೀಪ್ ಪೈ ಅವರು ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಅವರು, ಮಾರ್ಚ್ 20-21ರಂದು ನಡೆಯಲಿರುವ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಎಂದು ಕರೆ ನೀಡಿದರು.

ಲಂಡನ್‍ನಲ್ಲೂ ಕೊಂಕಣಿ ಭಾಷೆ, ಸಾಹಿತ್ಯ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಿಶ್ವ ಕೊಂಕಣಿ ಕೇಂದ್ರ ಮೂಲಕ ಸಾಧಕರನ್ನು ಗೌರವಿಸುವ ಕೆಲಸ ನಿರಂತರ ನಡೆಯುತ್ತಿದೆ. ಕೊಂಕಣಿ ಬಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಅನೇಕ ಸಂಸ್ಥೆಗಳು ಕಾರ್ಯಪ್ರವೃತ್ತ ವಾಗಿದೆ ಎಂದರು.

ಈ ಬಗ್ಗೆ ಮಾತು ಮುಂದುವರೆಸಿದ ಅವರು, ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಬದಲ್ಲಿ ಕೊಂಕಣಿ ಬಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಿ ಕೊಂಕಣಿ ಅಕಾಡೆಮಿಯನ್ನು ನೀಡಿದ್ದರು ಎಂದು ಘಟನೆಯನ್ನು ಸ್ಮರಿಸಿದ ಅವರು, ಈ ಕಾರ್ಯದಲ್ಲಿ ಶ್ರಮಿಸಿದ ಎಲ್ಲಾ ಕೊಂಕಣಿ ಸಾಮಾಜಿಕ ಕಾರ್ಯಕರ್ತರನ್ನು ಸ್ಮರಿಸಿ ಗೌರವ ಸೂಚಿಸಿದರು.

ಈ ಸಂದರ್ಭ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಜಗದೀಶ್ ಪೈ, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಕೋಶಾಧಿಕಾರಿ ಮನೋಹರ್ ಕಾಮತ್, ರಿಜಿಸ್ಟರ್ ನಿತ್ಯಾನಂದ ನಾಯಕ್, ಸಾಣೂರು ನರಸಿಂಹ ನಾಯಕ್, ಕುಯಿಲಾಡಿ ಸುರೇಶ್ ನಾಯಕ್, ರಾಘವೇಂದ್ರ ಕಿಣಿ, ಸುಮಿತ್ರಾ ನಾಯಕ್, ವೆರೋನಿಕ ಕರ್ನೇಲಿಯೊ, ಪೂರ್ಣಿಮಾ ಸುರೇಶ್, ಶ್ರೀಶ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *

error: Content is protected !!