ಮಣಿಪಾಲ: ಯುವತಿ ನಿಗೂಢ ನಾಪತ್ತೆ! – ಕಡಿಯಾಳಿಯ ಯುವಕರಿಬ್ಬರು ವಶಕ್ಕೆ
ಮಣಿಪಾಲ: ಕೆಎಂಸಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿಯೊರ್ವರ ಮನೆಕೆಲಸದ ಯುವತಿರ್ಯೊಳು ಕಳೆದ ರಾತ್ರಿ ನಾಪತ್ತೆಯಾದ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಜಾರ್ಖಾಂಡ್ ಮೂಲದ 21 ವರ್ಷದ ಯುವತಿ ಮಂಗಳವಾರ ರಾತ್ರಿಯಿಂದ ತಮ್ಮ ಕೆಎಂಸಿ ಕ್ವಾಟ್ರಸ್ನಿಂದ ನಾಪತ್ತೆಯಾಗಿರುವ ಬಗ್ಗೆ ಪ್ರಾಧ್ಯಾಪಕಿ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳೀಯ ಪ್ರದೇಶದ ಸಿಸಿಟಿವಿ ಪರೀಶಿಲಿಸಿದಾಗ ಯುವತಿನ್ನು ಕೆಎಂಸಿ ಆಸ್ಪತ್ರೆಯ ಆವರಣದಲ್ಲಿರುವ ಲಾಂಡ್ರಿ ಮಾಲಕ ಕಾರಿನಲ್ಲಿ ರಾತ್ರಿ 11 ಗಂಟೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿತ್ತು ಎನ್ನಲಾಗಿದೆ.
ಸದ್ಯ ಕಡಿಯಾಳಿಯ ಯುವಕರಿಬ್ಬರನ್ನು ಮಣಿಪಾಲ ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದು ತೀವೃ ವಿಚಾರಣೆಗೆ ಒಳಪಡಿಸಿದ್ದಾರೆ.