ಕೊರಂಗ್ರಪಾಡಿ: ವಾರದ ಸಂತೆಗೆ ಚಾಲನೆ
ಉಡುಪಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ಇನ್ನು ಮುಂದಿನ ದಿನಗಳಲ್ಲಿ ಪ್ರತೀ ಮಂಗಳವಾರ ನಡೆಯಲಿರುವ ವಾರದ ಸಂತೆಗೆ ಇಂದು ಚಾಲನೆ ನೀಡಲಾಯಿತು. ಈ ವಾರದ ಸಂತೆಯನ್ನು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂತೆಗೆ ಬರುವ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ನ್ಯಾಯೋಚಿತ ಬೆಲೆಗೆ ನೀಡಿ ವಿಶ್ವಾಸಗಳಿಸಿ ಎಂದು ವ್ಯಾಪಾರಿಗಳಿಗೆ ತಿಳಿಸಿದರು.
ಈ ವೇಳೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಕೊರಂಗ್ರಪಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೂತನ ಆಡಳಿತ ಇನ್ನಷ್ಟು ಮಾದರಿ, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭ ನಗರ ಸಭಾ ಸದಸ್ಯ ವಿಜಯ ಪೂಜಾರಿ, ಅಲೆವೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಸುಧಾಕರ ಪೂಜಾರಿ, ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಶೆಟ್ಟಿ, ಶ್ಯಾಮಲ ಸುಧಾಕರ್, ಮನಮೋಹನ್, ಲಿಸ್ವಿಟಾ ಡೇಸಿ ಅಮ್ಮನ್ನ, ಅಮೃತಾ ಯು ಪೂಜಾರಿ, ಯತೀಶ್ ಕುಮಾರ್, ಜಲೇಶ್ ಶೆಟ್ಟಿ, ರೂಪೇಶ್ ದೇವಾಡಿಗ, ಶಬರೀಶ್ ಸುವರ್ಣ, ರೇಣುಕ ಶೆಟ್ಟಿ, ಗೀತಾ ಶೆಟ್ಟಿಗಾರ್ ಸ್ಥಳೀಯ ಪ್ರಮುಖರಾದ ರಾಘ ಕೋಟ್ಯಾನ್, ವಸಂತ ಕೋಟ್ಯಾನ್, ಬೇಬಿ, ಪಂಚಾಯತ್ ಅಭಿವದ್ಧಿ ಅಧಿಕಾರಿ ದಯಾನಂದ ಬೆನ್ನೂರ್ ಮೊದಲಾದವರು ಉಪಸ್ಥಿತರಿದ್ದರು.