ಉಡುಪಿ: ಹಾರ್ಡ್ ವೇರ್ ಮಾಲಕ ನಾಪತ್ತೆ

ಉಡುಪಿ ಮಾ.5: ಅಂಬಾಗಿಲಿನ ಹಾರ್ಡ್ ವೇರ್ ವೊಂದರ ಮಾಲಕ, ಬನ್ನಂಜೆ ಟವರ್‌ನ ನಿವಾಸಿ ಎಡ್ವರ್ಡ್ ಸೋನ್ಸ (56) ಎಂಬ ವ್ಯಕ್ತಿಯು ಮಾರ್ಚ್ 3 ರಿಂದ ನಾಪತ್ತೆಯಾಗಿರುತ್ತಾರೆ.

ಚಹರೆ: 5 ಅಡಿ 7 ಇಂಚು ಎತ್ತರವಿದ್ದು, ದಪ್ಪ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವoತೆ ನಗರ ಪೊಲೀಸ್
ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!