ಆರ್ ಟಿಐ ಕಾರ್ಯಕರ್ತರ ಸಂಘಟನೆ ರಚನೆ ಬಗ್ಗೆ ಮಾ.6 ರಂದು ಬ್ರಹ್ಮಾವರದಲ್ಲಿ ಸಭೆ
ಬ್ರಹ್ಮಾವರ: ಆರ್ ಟಿಐ ಕಾರ್ಯಕರ್ತರ ಸಂಘಟನೆ ರಚಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಮಾ.6 ರಂದು ನಡೆಸಲು ನಿರ್ಧರಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಆರ್ ಟಿಐ ಕಾರ್ಯಕರ್ತರ ಮೇಲೆ ಸುಳ್ಳು ಆಪಾದನೆ, ಬೆದರಿಕೆ, ಹಲ್ಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತರಾಗಲು, ಮಾ.6 ರಂದು ಸಂಜೆ 4 ಗಂಟೆಗೆ ಬ್ರಹ್ಮಾವರದ ಮದರ್ ಪ್ಯಾಲೆಸ್ ಹಾಲ್‍ನಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಯಕರ ಮೊಬೈಲ್ ನಂ. 7483087492 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.