ಭೂ ಕುಸಿತದಲ್ಲಿ ಸಿಲುಕಿದ ಇಬ್ಬರು ಕಾರ್ಮಿಕರು: ರಕ್ಷಣಾ ಕಾರ್ಯಾಚರಣೆ

ಪುತ್ತೂರು:  ಭೂ ಕುಸಿತ ಸಂಭವಿಸಿ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡ ಘಟನೆ ದ.ಕ ಜಿಲ್ಲೆಯ ಪುತ್ತೂರಿನ ಪಾಣಾಜೆ ಗ್ರಾಮದ ಕೋಟೆ ರಸ್ತೆಯ ಕೆಮಾಜೆ ಎಂಬಲ್ಲಿ ನಡೆದಿದೆ.

ಮಣ್ಣಿನಡಿ ಸಿಲುಕಿರುವ ಕಾರ್ಮಿಕರು ಪಾಣಾಜೆ ಗ್ರಾಮದ ಪಾರ್ಪಳದವರು ಎಂದು ತಿಳಿದುಬಂದಿದೆ. ಈ ಕಾರ್ಮಿಕರು ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಹೋಗಿದ್ದರು. ಈ ವೇಳೆ ಪೈಪ್ ಮುರಿದು ಇಬ್ಬರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಪಕ್ಕದಲ್ಲಿಯೇ ಜೆಸಿಬಿ ಮಣ್ಣು ಅಗೆಯುತ್ತಿದ್ದುದರಿಂದ ಮಣ್ಣು ಜರಿದು ಹೊಂಡದೊಳಗೆ ಬಿದ್ದಿದೆ. ಇದರಿಂದ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 

Leave a Reply

Your email address will not be published. Required fields are marked *

error: Content is protected !!