ಕೇರಳದಲ್ಲಿ ಬಿಜೆಪಿ ಗೆಲ್ಲಿಸಿದ್ದಲ್ಲಿ ಗುಣಮಟ್ಟದ ಗೋ ಮಾಂಸ: ಎನ್ ಪ್ರಕಾಶ್
ಕೇರಳ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಗೆಲ್ಲಿಸುವ ಸಲುವಾಗಿ ಮತದಾರರಿಗೆ ವಿವಿಧ ಭರವಸೆಗಳನ್ನು ನೀಡುತ್ತಾರೆ. ಈ ಭರವಸೆಗಳೂ ಈಡೆರುತ್ತೋ ಇಲ್ಲವೋ ಅನ್ನೋದು ಅದು ಬೇರೆ ವಿಷ್ಯಾ ಅದರೆ ಈ ಭರವಸೆಗಳು ಮತದಾರರಲ್ಲಿ ಪಕ್ಷದ ಬಗೆಗೆ ಸಕಾರಾತ್ಮಕ ಅಭಿಪ್ರಾಯ ಹುಟ್ಟಿಸುವಲ್ಲಿ ಹಲವು ಭಾರಿ ಯಶಸ್ವಿಯಾದ್ದೂ ಇದೆ. ಆದರೆ ಕೇರಳದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮುಖಂಡರೊಬ್ಬರು ನೀಡಿದ ಭರವಸೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.
ಹೌದು ಕೇರಳದಲ್ಲಿ ವಿಧಾನ ಸಭಾ ಚುನಾವಣೆಯ ಹಿನ್ನೆಲೆ ಚಟುವಟಿಕೆಗಳು ಗರಿಗೆದರಿದೆ. ಈ ನಡುವೆ ಬಿಜೆಪಿ ಮುಖಂಡರೊಬ್ಬರು ಎಡವಟ್ಟು ಮಾಡಿಕೊಂಡಿದ್ದು, ಈ ಭಾರೀ ಕೇರಳದಲ್ಲಿ ಬಿಜೆಪಿಯನ್ನ ಗೆಲ್ಲಿಸಿದ್ದಲ್ಲಿ ಗುಣಮಟ್ಟದ ಗೋ ಮಾಂಸವನ್ನ ಕೊಡುವ ಭರವಸೆ ನೀಡಿದ್ದಾರೆ. ಮುಖಂಡನ ಭರವಸೆಗೆ ಬಿಜೆಪಿಗರೇ ತಬ್ಬಿಬ್ಬಾಗಿದ್ದಾರೆ. ಒಂದೆಡೆ ಬಿಜೆಪಿ ದೇಶದಾದ್ಯಂತ ಗೋ ಮಾಂಸ ನಿಷೇಧ ಮಾಡ್ತಾ ಇದ್ದರೆ, ಮತ್ತೊಂದೆಡೆ ಬಿಜೆಪಿ ಮುಖಂಡರ ಈ ರೀತಿ ಹೇಳಿಕೆ ಪಕ್ಷದಲ್ಲಿ ಮುಜುಗರ ಉಂಟಾಗುವಂತೆ ಮಾಡಿದೆ.