‘ಉಡುಪಿಸ್ ಕ್ಯೂಟ್ ಕಿಡ್ – 2020’ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

ಉಡುಪಿ: ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ಉಡುಪಿ ಜಿಲ್ಲೆಯ ಮುದ್ದು ಮಕ್ಕಳಿಗಾಗಿ ಆಯೋಜಿಸಿದ್ದ  “ಉಡುಪಿಸ್ ಕ್ಯೂಟ್ ಕಿಡ್ 2020” ಎನ್ನುವ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಇಶ್ನಾ ಪ್ಲೇ ಸ್ಕೂಲ್‍ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಮಕ್ಕಳಿಗಾಗಿ ನಡೆದ ಈ ಸ್ಪರ್ಧೆಯಲ್ಲಿ ಉಡುಪಿಸ್ ಕ್ಯೂಟ್ ಕಿಡ್ ಟೈಟಲ್ ಗೆದ್ದು ಪ್ರಥಮ ಬಹುಮಾನ ಪಡೆದ ಸಂದೇಶ್ ನಾಯಕ್ ಮತ್ತು ವಿನಯ ನಾಯಕ್ ದಂಪತಿಗಳ 1 ವರ್ಷದ ಮಗು ಇಶಾನ್ ಎಸ್ ನಾಯಕ್ ಹಾಗೂ ರನ್ನರ್ ಅಪ್ ಬಹುಮಾನ ಪಡೆದ ಗಿರೀಶ್ ಮತ್ತು ಸರಿತಾ ದಂಪತಿಗಳ 2 ವರ್ಷದ ಮಗು ಶರಣ್ಯ ಮತ್ತು ಸಮಾಧಾನಕರ ಬಹುಮಾನ ಪಡೆದ 10 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸ್ಪರ್ಧೆಯ ತೀರ್ಪುಗಾರರಾಗಿ ಪತ್ರಿಕಾ ಛಾಯಾಚಿತ್ರಗ್ರಾಹಕ ಜನಾರ್ಧನ ಕೊಡವೂರು, ಉಡುಪಿಯ ನವೀನ್ ಸ್ಟುಡಿಯೋದ ನವೀನ್ ಬಲ್ಲಾಳ್, ಅಂಬಾಗಿಲುವಿನ ಸರಿಗಮ ಸ್ಟುಡಿಯೋದ ಗಣೇಶ್ ಎನ್ ಆಮೀನ್ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ 4 ವರ್ಷದೊಳಗಿನ ಮಕ್ಕಳಿಗೆ   [email protected]  ಮೂಲಕ ಅನ್ ಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಮಕ್ಕಳಿಗೆ ಮತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅಲ್ಲದೆ ಈ ಮಕ್ಕಳ ಈ ಆನ್ ಲೈನ್ ಸ್ಪರ್ಧೆಗೆ “ಉಡುಪಿ ಟೈಮ್ಸ್” ಮೀಡಿಯಾ ಪಾರ್ಟ್‍ನರ್ ಆಗಿ ಕಾರ್ಯನಿರ್ವಹಿಸಿತ್ತು. 

Leave a Reply

Your email address will not be published. Required fields are marked *

error: Content is protected !!