ಮುಂಬೈ: ನಟಿ ಹಾಗೂ ನಿರ್ಮಾಪಕರ ಮನೆ ಹಾಗೂ ಕಚೇರಿಗೆ ಐಟಿ ದಾಳಿ

ಮುಂಬೈ: ಹಿಂದಿ ಹಾಗೂ ತೆಲುಗು ಚಿತ್ರಗಳ ಮೂಲಕ ಭಾರತೀಯ ಚಿತ್ರಗಂಗದಲ್ಲಿ ಜನಪ್ರಿಯತೆ ಪಡೆದಿರುವ ತಾಪ್ಸಿ ಪನ್ನು ಹಾಗೂ ಹೆಸರಾಂತ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರಿಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಮುಂಬೈನಲ್ಲಿರುವ ನಟಿ ಹಾಗೂ ನಿರ್ಮಾಪಕರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳು ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಶೋಧ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ವಿಕಾಸ್ ಅವರೊಂದಿಗೆ ಫ್ಯಾಂಟಮ್ ಫಿಲ್ಮ್ಸ್ ಪ್ರೊಡಕ್ಷನ್  ಹೌಸ್ ನ ಸಹ ಮಾಲೀಕತ್ವವನ್ನು ಹೊಂದಿರುವ ನಿರ್ಮಾಪಕ ಮಧು ಮಂಟೆನಾ ಅವರ ಮನೆಯ ಮೇಲೂ ಐಟಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ. 

Leave a Reply

Your email address will not be published. Required fields are marked *

error: Content is protected !!