ಮಾನ-ಮರ್ಯಾದೆ ಇದ್ದರೆ ಸರ್ಕಾರ ಕೂಡಲೇ ರಾಜೀನಾಮೆ ತೆಗೆದುಕೊಂಡು ಎಫ್ಐಆರ್ ದಾಖಲಿಸಿ: ಸಿದ್ದರಾಮಯ್ಯ
ಬೆಂಗಳೂರು: ಸಚಿವ ರಮೇಶ್ ಜಾರಕಿ ಹೊಳಿ ವಿಡಿಯೋ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಈ ಕೂಡಲೇ ಸಚಿವ ರಮೇಶ್ ಜಾರಕಿ ಹೊಳಿಯಿಂದ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು, ಈ ಕಾಮಕಾಂಡ ಇಡೀ ರಾಷ್ಟ್ರಕ್ಕೆ ಗೊತ್ತಾಗಿದೆ. ಮಾನ-ಮರ್ಯಾದೆ ಇರೋ ಸರ್ಕಾರ ಕೂಡಲೇ ರಾಜೀನಾಮೆ ತೆಗೆದುಕೊಂಡು ಎಫ್‍ಐಆರ್ ದಾಖಲಿಸಬೇಕು. ಮನುಷ್ಯನ ಮೌಲ್ಯಗಳಿಗೆ ಬೆಲೆ ಕೊಡುವುದಾದರೆ ಕೂಡಲೇ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.