ಮಟಪಾಡಿ: ಸ್ಟಾರ್ ಬುಲ್ಸ್ ಗೆ ‘ಗ್ರೀನ್ ಪಾರ್ಕರ್ಸ್ ಕಪ್-2021’

ಉಡುಪಿ: ಗ್ರೀನ್ ಪಾರ್ಕರ್ಸ್ ಯೂತ್ ಕ್ಲಬ್ ಬಲ್ಜಿ ಮಟಪಾಡಿ ಇವರ ಆಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ‘ಗ್ರೀನ್ ಪಾರ್ಕರ್ಸ್ ಕಪ್ -2021′ ಮಟಪಾಡಿಯಲ್ಲಿ ನಡೆಯಿತು.

ಈ ಪಂದ್ಯಾಕೂಟದಲ್ಲಿ ಸ್ಥಳೀಯ ಆಹ್ವಾನಿತ ಹತ್ತು ತಂಡಗಳು ಭಾಗವಹಿಸಿದ್ದವು. ಈ ವಾಲಿಬಾಲ್ ಪಂದ್ಯಾಟದಲ್ಲಿ ಸ್ಟಾರ್ ಬುಲ್ಸ್ ತಂಡ  ಪ್ರಥಮ ಬಹುಮಾನವನ್ನು ಪಡೆದರೆ ನ್ಯೂಸ್ಟಾರ್ ರಾಕರ್ಸ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.

ಪಂದ್ಯಾಟದಲ್ಲಿ ಬೆಸ್ಟ್ ಸ್ಟ್ರೈಕರ್ ಆಗಿ ಗಣೇಶ್, ಬೆಸ್ಟ್ ಸೆಟ್ಟರ್ ಆಗಿ ರೋಹನ್, ಬೆಸ್ಟ್ ಡಿಫೆಂಡರ್ ಆಗಿ ಚೇತನ್ ಆಚಾರ್ಯಾ, ಆಲ್ ರೌಂಡರ್ ಆಗಿ ದಿನೇಶ್ ನಾಯಕ್ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವಾರಾಜ್ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಈ ವೇಳೆ ಊರಿನ ಮಾಜಿ ಸೈನಿಕರಾದ ಸತೀಶ್ ಪೂಜಾರಿ, ಅಬ್ದುಲ್ ಸಲೀಮ್, ಮೆಸ್ಕಾಂ ಉದ್ಯೋಗಿ ಗಣೇಶ್ ದೇವಾಡಿಗ,  ಮಟಪಾಡಿ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಶೆಟ್ಟಿ, ಮತ್ತು ಮಟಪಾಡಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ ಶೆಟ್ಟಿ, ಪತ್ರಿಕಾ ವಿತರಕರಾದ ಗಣೇಶ್ ನಾಯಕ್ ಹಾಗೂ ಕ್ರೀಡಾ ಪಟು ರಕ್ಷಿತಾ ಗಾಣಿಗ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಉಮ್ಮರಬ್ಬ ಶೇಖ್, ಅಶೋಕ್ ಪೂಜಾರಿ, ಸ್ಟಾಲಿನ್ ಸಿಕ್ವೇರಾ, ಕೆ ಪಿ ಇಬ್ರಾಹಿಂ ಪವಿತ್ರಾ ಗಣೇಶ್ ನಾಯಕ್, ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಸ್ಥಳೀಯರಾದ ಸುರೇಶ್ ನಾಯಕ್, ಅಣ್ಣಪ್ಪ ಗಾಣಿಗ, ಗಣೇಶ್ ನಾಯಕ್, ಮಹಾಬಲ ಪೂಜಾರಿ, ಅಲ್ತಾಫ್ ಅಹ್ಮದ್, ಹಾಗೂ ಹತ್ತು ತಂಡಗಳ ಮಾಲಿಕರು ಹಾಗೂ ಯೂತ್ ಕ್ಲಬ್ ನ ಮಹಿಳಾ ಮತ್ತು ಪುರುಷ ಸದಸ್ಯರು, ಪತ್ರಕರ್ತ ಚೇತನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!