ಹೆಬ್ರಿ: ಬೈಕ್ ಡಿಕ್ಕಿ ಹೊಡೆದು ಜಿಂಕೆ ಮೃತ್ಯು

ಹೆಬ್ರಿ: (ಉಡುಪಿ ಟೈಮ್ಸ್ ವರದಿ)ಬೈಕ್ ಡಿಕ್ಕಿ ಹೊಡೆದು ಜಿಂಕೆಯೊಂದು ಮೃತಪಟ್ಟ ಘಟನೆ ಉಡುಪಿ – ಹೆಬ್ರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಕನ್ಯಾನ ಎಂಬಲ್ಲಿ ಇಂದು ನಡೆದಿದೆ.

ಖಾಸಗಿ ಬಸ್ ಚಾಲಕ ಹರೀಶ್ ಎಂಬವರು ಇಂದು ಮುಂಜಾನೆ ಬೈಕ್‍ನಲ್ಲಿ ಈ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಜಿಂಕೆಯೊಂದು ಏಕಾಏಕಿ ರಸ್ತೆಗೆ ಜಿಗಿದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಬೈಕ್ ಜಿಂಕೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ವೇಳೆ ಗಂಭೀರ ಗಾಯಗೊಂಡ ಹರೀಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

Leave a Reply

Your email address will not be published. Required fields are marked *

error: Content is protected !!