ಜೇಸಿಐ ಉಡುಪಿ ಸಿಲ್ವರ್ ಸ್ಟಾರ್: ನೂತನ ಅಧ್ಯಕ್ಷರಾಗಿ ಸಂಪ್ರದಾ ಭಟ್ ಪದಗ್ರಹಣ

ಉಡುಪಿ: ಜೇಸಿಐ ಉಡುಪಿ ಸಿಲ್ವರ್ ಸ್ಟಾರ್ ಇದರ ಪ್ರಸ್ತಕ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಕಟಪಾಡಿ ಜೇಸಿಐ ಭವನದಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯ ಹದಿನೈದರ ಪೂರ್ವ ವಲಯಾಧ್ಯಕ್ಷ ಜೆಸಿ ಹರಿಶ್ಚಂದ್ರ ಅಮೀನ್ ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.

ವಲಯ ಹದಿನೈದರ ಉಪಾಧ್ಯಕ್ಷ ಆರ್ ಪಿಸಿ ದರ್ಶಿತ್ ಆರ್ ಶೆಟ್ಟಿ, ಕಾರ್ಯದರ್ಶಿ ಜೆ.ಎಫ್.ಜೆ ಆಶಾ ಆಲನ್ ವಾಸ್, ಜ್ಯೋತಿ ರಮಾನಂದ ಶೆಟ್ಟಿ ಉಪಸ್ಥಿತರಿದ್ದರು. ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಜೆ ಸಿ ಸಂಪ್ರದಾ ಭಟ್, ಕಾರ್ಯದರ್ಶಿ ಜೆಸಿ ಸಿದ್ಧಾರ್ಥ್ ಕದ್ರಿ ಮತ್ತು ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷ ದರ್ಶಿತ್ ಆರ್ ಶೆಟ್ಟಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ, ತನ್ನ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ‘ಉಡುಪಿ ಟೈಮ್ಸ್’ ಪ್ರವರ್ತಕ ಉಮೇಶ್ ಮಾರ್ಪಳ್ಳಿ ಮತ್ತು ಮೆಸ್ಕಾಂ ಸಿಬ್ಬಂದಿ ಗದ್ಯಪ್ಪ ಗಡ್ಡಿ ಅವರ ಸೇವೆಯನ್ನು ಗುರುತಿಸಿ ಅತಿಥಿಗಳ ಮೂಲಕ ಸಮ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜೆಸಿಆರ್ ಟಿ ಚೇರ್ ಪರ್ಸನ್ ಜ್ಯೋತಿ ಕೃಷ್ಣ ಪೂಜಾರಿ, ಜೆಸಿಐ ಚೇರ್ ಪರ್ಸನ್ ಆದರ್ಶ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!