ಬಿಜೆಪಿಯ ಪ್ರಭಾವಿ ಮುಖಂಡ, ಸಚಿವ ರಮೇಶ್ ಜಾರಕಿಹೊಳೆಯ ರಾಸಲೀಲೆ ಸಿಡಿ ಬಹಿರಂಗ

ಬೆಂಗಳೂರು: ರಾಜಕಾರಣಿಗಳ ವಿಡಿಯೋ ಸಿಡಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಭಾರಿ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡ ಹಾಗೂ ರಾಜ್ಯ ಸಚಿವರಾಗಿರುವ ರಮೇಶ್ ಜಾರಕಿಹೊಳೆಯವರದ್ದು ಎನ್ನಲಾದ ವೀಡಿಯೋ ಸಿಡಿಯನ್ನು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬವರು ಬೆಂಗಳೂರು ಪೊಲೀಸ್ ವರಿಷ್ಠರಿಗೆ ಹಸ್ತಾಂತರಿಸಿದ್ದಾರೆ.

ಇದರೊಂದಿಗೆ ದಿನೇಶ್ ಕಲ್ಲಹಳ್ಳಿ ಅವರು, ಮಾಧ್ಯಮಗಳಿಗೆ ಸಿಡಿಯನ್ನು ನೀಡಿದ್ದು, ಈಗಾಗಲೇ ಪ್ರಮುಖ ಟಿವಿ ಚಾನೆಲ್ ಗಳು ಈ ವೀಡಿಯೋವನ್ನು ಪ್ರಸಾರ ಮಾಡುತ್ತಿದೆ. ಅಲ್ಲದೆ ಈ ವೀಡಿಯೋ ಈಗಾಗಲೇ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.

ಕೆಲಸ ಕೇಳಿಕೊಂಡು ಬಂದಿದ್ದ ಯುವತಿಯನ್ನು ರಮೇಶ್ ಜಾರಕಿಹೊಳಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಪಂತ್ ರವರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!