ಜೈಲಿನಿಂದ ಹೊರಬರುತ್ತಿದ್ದಂತೆ ಸುಲಿಗೆ ಕೃತ್ಯ: ಆರೋಪಿಯ ಬಂಧನ
ಉಳ್ಳಾಲ: ಜೈಲಿನಿಂದ ಹೊರಬರುತ್ತಿದ್ದಂತೆ ಮಹಿಳೆ ಸರ ಸುಲಿಗೆ ಕೃತ್ಯ ಆರಂಭಿಸಿದ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಪಾನೇಲ ನಿವಾಸಿ ಇರ್ಷಾದ್ (23) ಬಂಧಿತ ಆರೋಪಿ.
ಈತ ಬೋಳಿಯಾರ್ ನಿವಾಸಿ ಶಾಂಭವಿ ಅವರು ತಮ್ಮ ಮನೆ ಸಮೀಪದ ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದಿದ್ದ ಆರೋಪಿ ಸರ ಎಳೆದು ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಇರ್ಷಾದ್ ಅತ್ಯಾಚಾರ ಯತ್ನ ಪ್ರಕರಣದಲ್ಲೂ ಭಾಗಿಯಾಗಿ ಬಂಧಿತನಾಗಿದ್ದ ಎಂದು ತಿಳಿದು ಬಂದಿದ್ದು.
ಈತ ವಾರದ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜನವರಿ ತಿಂಗಳಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿ ಬಂಧಿತನಾಗಿ ಜೈಲು ಸೇರಿದ್ದ. ಹೊರಬಂದ ಈತ ವಾರ ಕಳೆಯುವ ಮುಂಚೆಯೇ ಸರ ಕಳ್ಳತನ ಕೃತ್ಯವನ್ನು ಆರಂಭಿಸಿದ್ದ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.