ಅರ್ಚಕ ವೃತ್ತಿಯನ್ನೂ ಕಿತ್ತುಕೊಳ್ಳುತ್ತಿದ್ದಾರೆ: ಪೇಜಾವರಶ್ರೀ

ಮೈಸೂರು: ‘ಅರ್ಚಕ ವೃತ್ತಿಯನ್ನೂ ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ‘ವಿಪ್ರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈಲ್ವೆ ಪ್ಲಾಟ್‌ಫಾರಂನಲ್ಲಿರುವ ಹಮಾಲಿಗಳಿಗೆ ಇರುವ ಕಾನೂನು ರಕ್ಷ ಣೆಯೂ ನಮಗೆ ಇಲ್ಲವಾಗಿದೆ. ಅರ್ಚಕ ವೃತ್ತಿಯನ್ನೂ ಸರ್ಕಾರ ಕಿತ್ತುಕೊಳ್ಳುತ್ತದೆ ಎಂದರೆ ಹೇಗೆ? ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯನ್ನು ಕಟ್ಟಿಕೊಳ್ಳಬೇಕು’ ಎಂದರು.

ರಾಮಮಂದಿರ ನಿರ್ಮಾಣಕ್ಕೆ ₹ 1,500 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ₹ 2,100 ಕೋಟಿ ಸಂಗ್ರಹವಾಗಿದೆ. ರಾಮಮಂದಿರ ಕಟ್ಟುವುದು ದೊಡ್ಡದ್ದಲ್ಲ. ಆದರೆ, ಅದನ್ನು ಉಳಿಸಿಕೊಳ್ಳುವುದು ದೊಡ್ಡದು’ಎಂದರು.

Leave a Reply

Your email address will not be published. Required fields are marked *

error: Content is protected !!