ಮಂಗಳೂರು: ವಿವಾಹ ನಡೆದ ಕೆಲವೇ ಗಂಟೆಗಳಲ್ಲಿ ಮದುಮಗಳಿಗೆ ಹೃದಯಾಘಾತ!
ಮಂಗಳೂರು: ವಿವಾಹ ನಡೆದ ಕೆಲವೇ ಗಂಟೆಗಳಲ್ಲಿ ಮದುಮಗಳು ಹೃದಯಾಘಾತದಿಂದ ಮೃತಪಟ್ಟ ಘಟನೆಯೊಂದು ಮಂಗಳೂರಿನ ಅಡ್ಯಾರ್ನಲ್ಲಿ ನಡೆದಿರೋದಾಗಿ ವರದಿಯಾಗಿದೆ.
ಮಂಗಳೂರಿನ ಅಡ್ಯಾರ್ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಅವರ ಮಗಳು ಲೈಲಾ ಆಫಿಯಾ(23) ಮೃತಪಟ್ಟವರು.
ಆಫಿಯಾ ಅವರ ವಿವಾಹವೂ ಫೆ.28 ರಂದು ಕಣ್ಣೂರಿನ ಯುವಕ ಮುಬಾರಕ್ ಅವರೊಂದಿಗೆ ಅಡ್ಯಾರ್ ಕಣ್ಣೂರು ಜುಮಾ ಮಸೀದಿಯಲ್ಲಿ ನೆರವೇರಿತ್ತು. ಇದಾದ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಬಂದಿದ್ದರು.
ನವಜೋಡಿಗಳು ವಿವಾಹದ ಸಂಭ್ರಮದಲ್ಲಿದ್ದರು. ಈ ನಡುವೆ ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.