ಕರ್ನಾಟಕ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸರ್ವಿಸಸ್ ಅಸೋಸಿಯೇಶ್ ಸಂಘಟನೆ ಉದ್ಘಾಟನೆ

ಉಡುಪಿ: ನಗರದ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸರ್ವಿಸಸ್ ಅಸೋಸಿಯೇಶ್ ಸಂಘಟನೆ ಉದ್ಘಾಟನೆ ಕಾರ್ಯಕ್ರಮ ಜರುಗಿತು.

ಅಸೋಸಿಯೇಶನ್ ಅಧ್ಯಕ್ಷ ಬಿನೇಶ್ ವಿ.ಸಿ ಅಸೋಸಿಯೇಶನ್ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್ ಬಳಿಕ ಹಲವು ಕ್ಷೇತ್ರದ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಯಿತು. ಕೆಲವರಿಗೆ ಉದ್ಯೋಗ ಭದ್ರತೆ ಇಲ್ಲದಾಯಿತು. ನಮ್ಮ ಸರ್ವಿಸ್ ಸೆಂಟರ್‌ಗಳಲ್ಲಿಯೂ ಸಾಕಷ್ಟು ಸಮಸ್ಯೆಗಳು ಎದುರಾದವು. ಇದಕ್ಕೆಲ್ಲ ಪರಿಹಾರವಾಗಿ ಅಸೋಸಿಯೇಶನ್ ರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ಸಂಘಟನೆ ಮಾಡಲಾಗಿದೆ.

ಅಸಂಘಟಿತ ವಲಯ ಕಾರ್ಮಿಕ ವ್ಯಾಪ್ತಿ ನಾವು ಬರಲಿದ್ದೇವೆ. ಸರ್ಕಾರದಿಂದ ಸವಲತ್ತುಗಳು ನಮಗೆ ಸಿಗಬೇಕಿದ್ದು, ವಿವಿಧೊದ್ಧೇಶ ಸಹಕಾರ ಸಂಘವನ್ನು ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಿದ್ದೇವೆ ಎಂದರು. ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸರ್ವಿಸಸ್ ವಲಯದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ್ಯಂತ ಪ್ರತೀ ಜಿಲ್ಲೆಯಲ್ಲಿಯೂ ಅಸೋಸಿಯೇಶನ್ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಅಸೋಸಿಯೇಶನ್ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸತೀಶ್ ಕುಮಾರ್ ಟಿ.ಎಚ್ ಶಿವಮೊಗ್ಗ, ಕಾರ್ಯದರ್ಶಿ ಮಂಜುನಾಥ ಎಲ್.ಹಾಸನ, ಖಜಾಂಚಿ ಆರ್.ರವಿಚಂದ್ರನ್ ಬಳ್ಳಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗರಾಜ ಟಿ.ಕೆ ದಾವಣಗೆರೆ, ನಾಗರಾಜ.ಎಸ್ ಬೆಂಗಳೂರು, ಕುಮಾರಸ್ವಾಮಿ .ಎಂ ದಾವಣಗೆರೆ, ಕಾಶಿನಾಥ್ ಬಿ.ಕೇಶತ್ತಿ ವಿಜಯಪುರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!