ಮತ್ತೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 25 ರೂ. ಹೆಚ್ಚಳ
ನವದೆಹಲಿ: ದಿನದಿಂದ ದಿನ ಏರುತ್ತಿರುವ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಇದೀಗ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆ ಮತ್ತೆ ಏರಿಕೆ ಕಂಡಿದೆ.
ಮೂರು ದಿನಗಳ ಹಿಂದಷ್ಟೇ ಈ ಬೆಲೆ ರೂ. 25 ರಷ್ಟು ಏರಿಕೆ ಯಾಗಿತ್ತು. ಆದರೆ ಇದೀಗ ಮತ್ತೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳ ಕಂಡಿದೆ. ಅದರಂತೆ ನವದೆಹಲಿಯಲ್ಲಿ ಇಂದು (ಮಾ.1)ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 25 ರೂಪಾಯಿ ಏರಿಕೆ ಕಂಡಿದ್ದು, ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿ 1666 ರೂಪಾಯಿ ತಲುಪಿದೆ.
ಮಾರ್ಚ್ 1ರಿಂದ ಹೊಸ ದರ ಜಾರಿಗೆ ಬಂದಿದ್ದು, ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 819 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಫೆಬ್ರವರಿ 4 ಮತ್ತು 14 ರಂದು ದರ ಏರಿಕೆ ಮಾಡಲಾಗಿತ್ತು. ಬಳಿಕ ಫೆಬ್ರವರಿ 25 ರಂದು ಅಡುಗೆ ಅನಿಲದ ಬೆಲೆ 25 ರೂ.ಗೆ ಏರಿಕೆ ಯಾಗಿತ್ತು. ಇದು ಫೆಬ್ರವರಿ ತಿಂಗಳಲ್ಲಿ ಮೂರನೇ ಏರಿಕೆ ಯಾಗಿತ್ತು. ಇದೀದ ಮತ್ತೆ ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆಯಾಗಿದ್ದು ಜನರಲ್ಲಿ ಬೆಲೆ ಎರಿಕೆಯ ಆತಂಕ ಮತ್ತಷ್ಟು ಹೆಚ್ಚಿಸಿದೆ.