ರಾಜೀವ ನಗರ: ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ
ಮಣಿಪಾಲ: ರಾಜೀವ ನಗರ ಮಣಿಪಾಲ ಇವರು ದಾನಿಗಳಿಂದ ನಿರ್ಮಿಸಲ್ಪಟ್ಟಿರುವ ರಿಕ್ಷಾ ನಿಲ್ದಾಣವನ್ನು ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿಆಚಾರ್ಯ ಇಂದು ದೀಪ ಬೆಳಗುವುದ ಮೂಲಕ ಉದ್ಘಾಟಿಸಿದರು.
ನಾನು ಕಳೆದ 25 ವರ್ಷಗಳಿಂದ ರಿಕ್ಷಾ ಚಾಲಕರ ಅಭಿಮಾನಿ. ಯಾರು ಮಾಡದ ಅತ್ಯುತ್ತಮ ಸಮಾಜಮುಖಿ ಕೆಲಸ ಆಟೋ ಚಾಲಕರು ಮಾಡುತ್ತಿದ್ದಾರೆ ಎಂದು ಕೆ. ಕೃಷ್ಣಮೂರ್ತಿಆಚಾರ್ಯ ಅಭಿನಂದಿಸಿದರು.
ಪಂಚಾಯತ್ ಮಾಜಿ ಅಧ್ಯಕ್ಷರಾದ ಶಾಂತರಾಮ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರಾದ ಗ್ಲೋಸಿ ಮಾರ್ಗರೆಟ್ ಮತ್ತು ಉದ್ಯಮಿ ದಿನೇಶ್ ಶೆಟ್ಟಿ, ನಿಲ್ದಾಣದ ಅಧ್ಯಕ್ಷರಾದ ಪ್ರಮೋದ್ ಸಾಲಿಯನ್ ಮತ್ತು ಯಶೋದ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯರಾದ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟ್ಟು, ತಾಲೂಕು ಅಧ್ಯಕ್ಷರಾದ ಉದಯ್ ಪಂದುಬೆಟ್ಟು ಉಪಾಧ್ಯಕ್ಷರಾದ ಸಂತೋಷ್ ಶೇರಿಗಾರ್,ರವಿ ಸೇರಿಗಾರ್, ರಾಮ ಕಟ್ಟೆಗುಡ್ಡೆ ಮತ್ತು ಬಶೀರ್, ಸಚಿನ್ ಮತ್ತು ನಿಲ್ದಾಣದ ಸದಸ್ಯರು ಭಾಗವಹಿಸಿದ್ದರು. ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.