| ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕಿಮ್ಮಿಂಗ್ ನಡೆಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಈಗಾಗಲೇ ಸುದ್ದಿ ತಿಳಿದಿದ್ದೇವೆ. ಇದೀಗ ಅದೇ ಮಾದರಿ ಉಡುಪಿಯಲ್ಲೂ ಸ್ಕಿಮ್ಮಿಂಕ್ ನಡೆದಿರುವ ಸಾಧ್ಯತೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ.
ಹರ್ಷ, ಶ್ರೀಧರ್ ಕುಂದರ್ , ಲೊಕೇಶ್ ಹಣ ಕಳೆದುಕೊಂಡಿರುವವರು, ಈ ಪೈಕಿ ಹರ್ಷ, ಶ್ರೀಧರ್ ಕುಂದರ್ ಅವರು, ಸಿಂಡಿಕೇಟ್ ಬ್ಯಾಂಕ್ ನ ಮಾರ್ಕೆಟ್ ಯಾರ್ಡ್ ಶಾಖೆಯಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್ ಹೊಂದಿದ್ದರು. ಆದರೆ, 2020ರ ನ. 17 ರಂದು ಅವರ ಖಾತೆಯಿಂದ 16,500 ರೂ. ಹಣ ವಿದ್ ಡ್ರಾ ಆಗಿದೆ, ಈ ಬಗ್ಗೆ ಪರಿಶೀಲಿಸಿದಾಗ ಮಡಿಕೇರಿಯ ಎ.ಟಿ.ಎಂ. ನಿಂದ ಹಣ ಡ್ರಾ ಆಗಿರುತ ಬಗ್ಗೆ ತಿಳಿದುಬಂದಿರುತ್ತದೆ. ನಂತರ ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್ ನ್ನು ಬ್ಲಾಕ್ ಮಾಡಿಸಲಾಗಿತ್ತು.
ಇನ್ನು ಲೋಕೆಶ್ ಅವರು, ಸಿಂಡಿಕೇಟ್ ಬ್ಯಾಂಕ್ ನ ಆದಿ ಉಡುಪಿ ಶಾಖೆಯಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್ ಹೊಂದಿದ್ದರು. ಆದರೆ 2020ರ ಡಿ.4 ರಂದು ಅವರ ಖಾತೆಯಿಂದ 13,800 ರೂ ಹಣ ಕಾಸರಗೋಡುವಿನಲ್ಲಿನ ಎ.ಟಿ.ಎಂ. ನಿಂದ ವಿದ್ ಡ್ರಾ ಆಗಿರುವ ಬಗ್ಗೆ ಅವರ ಮೊಬೈಲ್ಗೆ ಸಂದೇಶ ಬಂದಿರುತ್ತದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ಲೋಕೇಶ್ ಅವರು, ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್ ನ್ನು ಬ್ಲಾಕ್ ಮಾಡಿಸಿರುತ್ತಾರೆ.
ಈ ನಡುವೆ ಫೆ.25 ರಂದು, ಮಂಗಳೂರಿನಲ್ಲಿ ನಡೆದ ಸ್ಕಿಮ್ಮಿಂಗ್ ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹರ್ಷ, ಶ್ರೀಧರ್ ಕುಂದರ್, ಲೊಕೇಶ್ ಅವರು, ತಮ್ಮ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಹಣವನ್ನು ತಮ್ಮ ಅರಿವಿಗೆ ಬಾರದ ಹಾಗೆ ಮೋಸದಿಂದ, ಎ.ಟಿ.ಎಂ. ಕಾರ್ಡ್ ನ್ನು ದುರ್ಬಳಕೆ ಮಾಡಿ, ವಿದ್ ಡ್ರಾ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
| |