| ಉಡುಪಿ: ನಗರದ ನೆಲ್ಲಿಕಟ್ಟೆ ಶ್ರೀ ಕಂಬಿಗಾರ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮವು ಫೆ. 27 ಮತ್ತು 28 ರಂದು ನಡೆಯಲಿದೆ ಎಂದು ದೈವಸ್ಥಾನದ ಮೊಕ್ತೇಸರ ಜಿ. ಶೇಖರ ಅಮೀನ್ ಮಠದಬೆಟ್ಟು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಫೆ. 27 ರಂದು ನೇಮದ ಪ್ರಯುಕ್ತ ದೈವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ಕೊಡವೂರು ಕಂಬ್ಳಕಟ್ಟರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶುದ್ದಕಲಶಾಭಿಷೇಕ, ಧ್ವಜಸ್ತಂಭ ಮುಹೂರ್ತ ನಡೆಯಲಿದೆ.
9 ಗಂಟೆಗೆ ಕಂಬಿಗಾರ ದೈವದ ದರ್ಶನ ಸೇವೆ ನಡೆಯಲಿದ್ದು, ಮಧ್ಯಾಹ್ನ ಚಪ್ಪರಾರೋಹಣವಾಗಿ ಶಿರಿಬೀಡು ಗದ್ದೆಯಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ ಶ್ರೀ ಕ್ಷೇತ್ರದಿಂದ ಭಂಡಾರ ಹೊರಡಲಿದ್ದು, ರಾತ್ರಿ ಬಬ್ಬುಸ್ವಾಮಿ ಮತ್ತು ಶ್ರೀ ದೇವಿ ತನ್ನಿಮಾನಿಗನ ನೇಮವು ನಡೆಯಲಿದೆ. ಫೆ. 28 ರಂದು 10ಕ್ಕೆ ಧೂಮಾವತಿ ಬಂಟ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಗುಳಿಗ ಮತ್ತು ಕೊರಗಜ್ಜ ದೈವದ ನೇಮವು ನಡೆಯಲಿರುವುದು ಎಂದು ತಿಳಿಸಿದ್ದಾರೆ.
| |