ಸ್ವಚ್ಛಭಾರತದ ಪರಿಕಲ್ಪನೆಯಲ್ಲಿ ಯಶಸ್ವಿಯಾದ ಕೆಮ್ಮಣ್ಣು ಗ್ರಾಮ: ಜನಾರ್ದನ ತೋನ್ಸೆ

ಕೆಮ್ಮಣ್ಣು : ಸ್ವಚ್ಛ ಭಾರತದ ಪರಿಕಲ್ಪನೆ ಮಹಾತ್ಮ ಗಾಂಧಿಯ ಕಾಲದ್ದು. ಅಂದಿನಿಂದ ಇಂದಿನ ವರೆಗೂ ಭಾರತವನ್ನು ಸ್ವಚ್ಛವಾಗಿಡಲು ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಸ್ವಚ್ಛಭಾರತ ಅಭಿಯಾನ ಅವೆಲ್ಲದರ ಮುಂದುವರೆದ ಭಾಗವಾಗಿದೆ. ನಮ್ಮ ಉಡುಪಿ ಜಿಲ್ಲಾ ಪಂಚಾಯತ್ ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಸ್ವಚ್ಚ. ಗ್ರಾಮದ ಮೂಲಕ ಅದನ್ನು ಸಾಕಾರಗೊಳಿಸಲು ಮುಂದಾಗಿದೆ.

ಆದರೇ ತೋನ್ಸೆ ಕೆಮ್ಮಣ್ಣು ಗ್ರಾ ಪಂ ನಲ್ಲಿ ಸರಕಾರದ ಯಾವುದೇ ಅನುದಾನಗಳು ಲಭ್ಯವಾಗದಿದ್ದರೂ ಆಡಳಿತಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಅವರ ವಿಶೇಷ ಕಾಳಜಿ ಮತ್ತು ಪಂಚಾಯತ್ ಅಧಿಕಾರಿಗಳ ಜಂಟೀ ಪ್ರಯತ್ನಕ್ಕೆ ಈ ಪರಿಸರದ 6 ಜನ ದಾನಿಗಳು ಕೈ ಜೋಡಿಸಿ ಅಭಿಮಾನದಿಂದ ಧನ ಸಹಾಯ ಮಾಡಿದ್ದಾರೆ.

ಇದು ಜಿಲ್ಲೆಯಲ್ಲಿ ಎಲ್ಲೂ ನಡೆಯದ ಮಾದರಿ ಕಾರ್ಯವಾಗಿದೆ. ಸಂಪೂರ್ಣ ದಾನಿಗಳ ಧನಸಹಾಯದಿಂದಲೇ ಕಸ ಸಾಗಾಟದ ವಾಹನ ಹಸ್ತಾಂತರವಾಗಿರುವ ಈ ಕಾರ್ಯಕ್ಕೆ ಶ್ರಮಿಸಿದ, ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆಗಳು.

ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಈ ತೋನ್ಸೆಯನ್ನು ಸ್ವಚ್ಛವಾಗಿಡಲೂ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ತೋನ್ಸೆ ಗ್ರಾ ಪಂ ನಿಂದ ಆಯೋಜಿಸಲಾದ ದಾನಿಗಳ ಸಹಾಯದಿಂದ ಕಸ ಸಾಗಾಟದ ವಾಹನ ಹಸ್ತಾಂತರ ಮತ್ತು ಆಡಳಿತಾಧಿಕಾರಿಯವರ ಬೀಳ್ಕೊಡುಗೆಯ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು. ತೋನ್ಸೆ ಎಂಬ ಹೆಸರು ಸಾಧನೆ ತೋರಿಸಲು ಹೆಸರುವಾಸಿಯಾಗಿದ್ದು, ಇಂದಿನ ಕಾರ್ಯ ಅದರ ಧ್ಯೋತಕವಾಗಿದೆ ಎಂದವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ದಾನಿಗಳ ಸಮಕ್ಷಮ, ಅತಿಥಿಗಳ ಉಪಸ್ಥಿತಿಯಲ್ಲಿ  ಪಂಚಾಯತ್ ಆಡಳಿತಾಧಿಕಾರಿಯವರು ಹೊಸದಾಗಿ ಖರೀದಿಸಲಾದ ವಾಹನದ ಕೀಲಿ ಕೈ ಯನ್ನು ಗ್ರಾ ಪಂ ನ ನೂತನ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ವಾಹನ ಖರೀದಿಗೆ ಧನ ಸಹಾಯ ಮಾಡಿದ ಕೆ.ಉಸ್ಮಾನ್ ಸಾಹೇಬ್ ಕುಟುಂಬದ ಪರವಾಗಿ ಮಹಮ್ಮದ್ ಇದ್ರೀಸ್, ನಿರ್ಮಲ ತೋನ್ಸೆ ಸಂಸ್ಥೆಯ ಪರವಾಗಿ ಗೌರವಾಧ್ಯಕ್ಷ ಬಿ.ಜಾಫರ್ ತೋನ್ಸೆ , ಅಧ್ಯಕ್ಷರಾದ ವೆಂಕಟೇಶ್ ಜಿ. ಕುಂದರ್, ಗಣಪತಿ ಸಹಕಾರಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್, ಸೈಮ್ ಅಸೋಸಿಯೇಟ್ಸ್ ನ ಜಿ.ಇಮ್ತಿಯಾಜ್, ಪ್ಯಾರಡೈಸ್ ಲಗೂನ್ ನ ಪಾಲುದಾರಿಣಿ ಪ್ರತಿಮಾ ಅವರನ್ನು ಸನ್ಮಾನಿಸಿ, ಗೌರವ ಸ್ಮರಣಿಕೆಯ ಜೊತೆ ಕೃತಜ್ಞತಾ ಪತ್ರ ನೀಡಲಾಯಿತು.

ಈ ಮಹತ್ತರ ಆಶಯವನ್ನು ದಾನಿಗಳ ನೆರವಲ್ಲಿ ತನ್ನ ಆರು ತಿಂಗಳ ಅಧಿಕಾರದ ಸಣ್ಣ ಅವಧಿಯಲ್ಲಿ ಕಾರ್ಯಗತಗೊಳಿಸಿದ ಪಂಚಾಯತ್ ಆಡಳಿತಾಧಿಕಾರಿಯವರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿ ಗೌರವಾದರಗಳೊಂದಿಗೆ ಸಾಂಕೇತಿಕವಾಗಿ ಬೀಳ್ಕೊಡಲಾಯಿತು.

ಗೌರವ ಸ್ವೀಕರಿಸಿದ ಅವರು ಇದು ನನ್ನ ಸಾಧನೆಯೇನಲ್ಲಾ. ಪಂಚಾಯತಿನ ಅಧಿಕಾರಿ ವರ್ಗ ಜನರ  ಮನ್ನಣೆ ಪಡೆದುದರ ಧ್ಯೋತಕ. ಇಲ್ಲದಿದ್ದಲ್ಲಿ ಸಣ್ಣ ಅವಧಿಯಲ್ಲಿ ಪ್ರತಿಕೂಲದ ಸ್ಥಿತಿಯಲ್ಲೂ ದಾನಿಗಳು ಕೈ ಜೋಡಿಸಿ ಆಶಯವನ್ನು ಸಾಕಾರಗೊಳಿಸಿದ್ದಾರೆ. ಕಸದ ವಿಲೇವಾರಿಗೆ ಒಂದು ಸ್ವಂತ ಕಟ್ಟಡ ನಿರ್ಮಾಣವೂ ದಾನಿಗಳ ನೆರವಿನಿಂದ ಶೀಘ್ರ ಕೈಗೂಡುವಂತಾಗಲಿ. ಗ್ರಾ ಪಂ ನ ಜನಪರ ಕಾರ್ಯ ಮುಂದುವರೆದು ಇದೊಂದು ಮಾದರಿ ಪಂಚಾಯತ್ ಅನ್ನಿಸಿಕೊಳ್ಳಲಿ.

ತಾನು ಎಲ್ಲೇ ಇದ್ದರೂ ಈ ಗ್ರಾಮವನ್ನು ಮರೆಯಲಾರೆ. ತನ್ನಿಂದಾದ ಸಹಕಾರ ಯಾವತ್ತೂ ನೀಡಲಿದ್ದೇನೆ ಎಂದು ದಾನಿಗಳ ಪರವಾಗಿ ಜಾಫರ್ ತೋನ್ಸೆ, ವೆಂಕಟೇಶ್ ಜಿ ಕುಂದರ್,  ಸತೀಶ್ ಶೆಟ್ಟಿ, ಪ್ರತಿಮಾ ಮಾತನಾಡಿ ಗ್ರಾ ಪಂ ನ ಅಭಿವೃದ್ದಿ ಕಾರ್ಯಗಳಲ್ಲಿ ಮುಂದೆಯೂ ಸಹಕಾರ ನೀಡುವ ಭರವಸೆ ನೀಡಿ ಅಭಿಮಾನದಿಂದ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಪಂಚಾಯತಿನ ನಿಕಟಪೂರ್ವ ಆದ್ಯಕ್ಷೆ ಫೌಜಿಯಾ ಸಾದಿಕ್,ನೂತನ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಮಾತನಾಡಿ ಸ್ವಚ್ಛ ಗ್ರಾಮದ ಆಶಯವನ್ನು ಸಾಧಿಸಲು ನೆರವು ನೀಡಿದವರಿಗೆ ವಂದನೆ ಸಲ್ಲಿಸಿ ನೂತನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರೂ ಗ್ರಾಮ ಸ್ವಚ್ಛತೆಯ ಕಾರ್ಯಕ್ಕಾಗಿ  ಜನಜಾಗೃತಿ ನಡೆಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಸಾಧಿಸಿ ತೋರಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ ಪಂ ಅಧ್ಯಕ್ಷರಾದ ಲತಾ ಅವರು ವಹಿಸಿದ್ದರು.
 ವೇದಿಕೆಯಲ್ಲಿ ದಾನಿಗಳ ಜೊತೆ ಗ್ರಾಮ ನೀರು ನೈರ್ಮಲ್ಯ ಸಮಿತಿಯ ಖಜಾಂಚಿ ರೆನೋಲ್ಡ್ ಮಿನೇಜಸ್, ಗ್ರಾಮ ಲೆಕ್ಕಿಗ ಜಗದೀಶ್, ನೂತನ ಆಡಳಿತ ಮಂಡಳಿ ಸದಸ್ಯರು  ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾಹನ ಖರೀದಿಗೆ ಕೈ ಜೋಡಿಸಿದ ಆಭರಣ ಸಂಸ್ಥೆಯ ಆಡಳಿತ ಪಾಲುದಾರ ಸುಭಾಷ್ ಕಾಮತ್, ಸ್ವಚ್ಛ ಗ್ರಾಮದ ಬಗ್ಗೆ ಅನುದಾನ ಒದಗಿಸಿರುವ ತಾ ಪಂ ಸದಸ್ಯೆ ಸುಲೋಚನಾ ಅವರ ಅನುಪಸ್ಥಿತಿಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!