ರಸ್ತೆಯಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ಮಗು ಮೃತ್ಯು
ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದಾಗ ಮಗುವಿನ ಮೇಲೆ ಒಣಗಿದ ಮರ ಬಿದ್ದು, ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರತೀಕ್ಷಾ (5) ಮೃತಪಟ್ಟ ದುರ್ಧೈವಿ ಮಗು. ಫೆ. 24 ರಂದು ಪ್ರತೀಕ್ಷಾ ಸಂಜೆ ವೇಳೆಗೆ ಅಂಗಡಿಗೆ ಹೋಗುತ್ತಿದ್ದ ಈ ವೇಳೆ ರಸ್ತೆ ಬದಿ ಇದ್ದ ಒಣಗಿದ ಮರ ಮಗುವಿನ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪ್ರತೀಕ್ಷಾರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರತೀಕ್ಷಾ ಮೃತಪಟ್ಟಿದ್ದಾರೆ.
ರಸ್ತೆ ಬದಿಯಲ್ಲಿ ನೂರಾರು ಮರಗಳು ಒಣಗಿ ನಿಂತಿದ್ದು ಇನ್ನಷ್ಟು ಬಲಿ ತೆಗೆದುಕೊಳ್ಳುವ ಮೊದಲು ಒಣಗಿದ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.