ಉಡುಪಿ: ನಗರ ಸಭೆಯ ನಿವೃತ್ತ ಇಂಜಿನೀಯರ್ ಜಿ.ಎಂ. ಪಾಟೀಲ್ ನಿಧನ
ಉಡುಪಿ: ಬೈಲೂರಿನ ಕೊರಂಗ್ರಪಾಡಿ ನಿವಾಸಿ ಜಿ.ಎಂ. ಪಾಟೀಲ್ (65) ತಮ್ಮ ಸ್ವಗ್ರಹದಲ್ಲಿ 24ರಂದು ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಪತ್ನಿ ಹಾಗು ಓರ್ವ ಪುತ್ರಿ, ಓರ್ವ ಪುತ್ರ ಹಾಗು ಅಪಾರ ಬಂದುಗಳನ್ನು ಅಗಲಿದ್ದಾರೆ. ಜಿ.ಮ್. ಪಾಟೀಲ್ ಅವರು ಉಡುಪಿ ನಗರ ಸಭೆಯಲ್ಲಿ ಇಂಜಿನೀಯರ್ ರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ವಾರಾಹಿ ಪ್ರಾಜೆಕ್ಟ್ ನಲ್ಲಿ ಸೇವೆ, ಮಂಗಳೂರಿನ ಮೆಸ್ಕಾಂ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ .ಇವರ ನಿಧನಕ್ಕೆ ಉಡುಪಿ ಶಾಸಕರು ಹಾಗು ನಗರ ಸಭೆಯ ಅಧ್ಯಕ್ಷರು ಹಾಗು ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.