ಚೆನೈ-ಮಂಗಳೂರು ರೈಲಿನಲ್ಲಿ ಸ್ಪೋಟಕ ವಸ್ತು ಪತ್ತೆ: ಮಹಿಳೆಯ ವಿಚಾರಣೆ
ಕಾಸರಗೋಡು: ಚೆನೈ-ಮಂಗಳೂರು ಸೂಪರ್ ಪಾಸ್ಟ್ ರೈಲಿನಲ್ಲಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಕೋಜಿಕ್ಕೋಡ್ನಲ್ಲಿ ನಡೆದಿದೆ.
ರೈಲು ಕೋಜಿಕ್ಕೋಡ್ ನಿಲ್ದಾಣಕ್ಕೆ ತಲಪಿದಾಗ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೈಲಿನ ಡಿ 1 ಕಂಪಾರ್ಟ್ಮೆಂಟ್ನ ಸೀಟಿನ ಅಡಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿದೆ. ಇದೀಗ ರೈಲಿನಲ್ಲಿ ಪತ್ತೆಯಾದ 117 ಜಿಲೆಟಿನ್ ಕಡ್ಡಿಗಳು, 350 ಡಿಟೋನೇಟರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಪೋಟಕಗಳು ಪತ್ತೆಯಾದ ಸೀಟಿನಲ್ಲಿದ್ದ ಚೆನ್ನೈ ಮೂಲದ ಪತ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆ ತಲಸ್ಸೆರಿಯಿಂದ ಮಹಿಳೆ ಚೆನ್ನೈಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಸ್ಪೋಟಕಕ್ಕೂ ಮಹಿಳೆಗೂ ಸಂಬಂಧ ಇದೆಯಾ ಎನ್ನುವ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.