ಖಾಸಗಿ ಬಸ್ಸುಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ
ಮಂಗಳೂರು, ಫೆ. 22:- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ವತಿಯಿಂದ ಕಳೆದ ವರ್ಷ ಡಿಸೆಂಬರ್ 4 ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಎಲ್ಲಾ ಖಾಸಗಿ ವಾಹನಗಳ ಅಧ್ಯರ್ಪಣ ವಾಹನವನ್ನು ಬಿಡುಗಡೆಗೊಳಿಸಿ ಬದಲಿ ವ್ಯವಸ್ಥೆ ಮತ್ತು ಎಲ್ಲಾ ಖಾಸಗಿ ಬಸ್ಸುಗಳಲ್ಲಿ ಜಿ.ಪಿ.ಎಸ್ ಅನ್ನು ಸಕ್ರೀಯವಾಗಿ ಅಳವಡಿಸಬೇಕು.
ನಗರ ಮತ್ತು ಗ್ರಾಮಾಂತರ ಬಸ್ಸುಗಳಲ್ಲಿ ಜ್ಯೋತಿ ವೃತ್ತದ ಬದಲಾಗಿ ಅಂಬೇಡ್ಕರ್ ವೃತ್ತವೆಂದು ಶಾಶ್ವತವಾಗಿ ನಮೂದಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.