ಹೆದ್ದಾರಿಯಲ್ಲಿ ಸಿಕ್ಕ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿದ ರಿಕ್ಷಾ ಚಾಲಕ
ಉಡುಪಿ: ಕಟಪಾಡಿ ಹೈವೆಯಲ್ಲಿ ಇಂದು ಸಿಕ್ಕಂತಹ ಬ್ಯಾಗ್‍ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ರಿಕ್ಷಾ ಚಾಲಕ ಭಾಸ್ಕರ ಅವರಿಗೆ ಹೈವೆಯಲ್ಲಿ ಈ ಬ್ಯಾಗ್ ಸಿಕ್ಕಿದ್ದು, ಅದರಲ್ಲಿ 25,000 ನಗದು ಇದ್ದಂತಹ 3 ಪರ್ಸ್, 2 ಮೊಬೈಲ್, 2 ಎಟಿಎಂ ಕಾರ್ಡ್ ಹಾಗೂ ಇತರ ವಸ್ತುಗಳು ಇದ್ದವು.
ಬ್ಯಾಗ್ ಸಿಕ್ಕ ತಕ್ಷಣ ಭಾಸ್ಕರ ಅವರು ಅದನ್ನು ಕಟಪಾಡಿ ಪೊಲೀಸ್ ಹೊರ ಠಾಣಿಗೆ ನೀಡಿದ್ದರು. ಬಳಿಕ ಬ್ಯಾಗ್‍ನ ವಾರಸುದಾರರನ್ನು ಪತ್ತೆ ಹಚ್ಚಿದ ಪೊಲೀಸರು, ಬ್ಯಾಗ್ ನ್ನು ಕಳೆದುಕೊಂಡಿದ್ದ ರಾಘವೇಂದ್ರ ರಾವ್ ಅವರಿಗೆ ಹಸ್ತಾಂತರಿಸಿದ್ದಾರೆ.