ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರೇ ಬರಲಿಲ್ಲ!
ಬಾಗಲಕೋಟೆ: ರಾಜ್ಯದ ಪ್ರತಿಯೊಂದು ಗ್ರಾಮಗಳ ಪರಿಸ್ಥಿತಿ, ಸಮಸ್ಯೆಗಳನ್ನು ಅರಿಯುವ ಸಲುವಾಗಿ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಗ್ರಾಮ ವಾಸ್ತವ್ಯವನ್ನು ಆರಂಭಿಸಲಾಗಿದೆ. ಆದರೆ ಇಲ್ಲೊಂದು ಕಡೆ ನಡೆದ ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ಬಂದರೂ ಗ್ರಾಮಸ್ಥರು ಮಾತ್ರ ಕಾಣಲೇ ಇಲ್ಲ.
ಹೌದು, ಬಾಗಲಕೋಟೆಯ ಹುನಗುಂದ ತಾಲೂಕಿನ ಬೇವಿನಮಟ್ಟಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ತಹಶೀಲ್ದಾರ ಜಿ.ಎಂ.ಕುಲಕರ್ಣಿ ಮತ್ತು ಇತರೆ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು, ಆದರೆ ತಹಶೀಲ್ದಾರರ ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರೇ ಬರದೆ ನೀರಸ ಪ್ರತಿಕ್ರಿಯೆ ತೋರಿದ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಜನರೇ ಬಾರದ ಕಾರಣ ಅಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ತರೇ ಇರದೆ ಸಭಾಂಗಣ ಬಿಕೋ ಎನ್ನುತ್ತಿತ್ತು.
ಗ್ರಾಮಸ್ತರು ಇಲ್ಲದ ಗ್ರಾಮ ವಾಸ್ತವ್ಯದ ದೃಶ್ಯ ಕಂಡರೆ ಈ ಗ್ರಾಮದಲ್ಲಿ ಸಮಸ್ಯೆಗಳೇ ಇಲ್ಲವೇ ಅಥವಾ ಆಡಳಿತ ವ್ಯವಸ್ಥೆ ಬಗ್ಗೆ ಜನರಿಗೆ ಭರವಸೆ ಇಲ್ಲವೇ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಳ್ಳೋದು ಸಾಮಾನ್ಯ.