ಉಡುಪಿ: ಸಹಕಾರಿ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟ ಆರೋಪಿಗಳಿಗೆ ಶಿಕ್ಷೆ

ಉಡುಪಿ ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳಿಗೆ ಶಿಕ್ಷೆ ವಿಧಿಸಲಾಗಿದೆ.ಕೆ.ಪಿ ಸುರೇಶ್ , ಪಿವಿ ರಾಜು, ರಾಜೇಶ್‌ ಶಿಕ್ಷೆಗೊಳಗಾದ ಆರೋಪಿಗಳು. 
ಈ ಮೂವರು ಆರೋಪಿಗಳ ತಂಡ ಉಡುಪಿ ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕುಗಳಿಗೆ ತೆರಳಿ ನಕಲಿ ವಿಳಾಸ  ಮತ್ತು ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಿದೆ. ಈ ಪೈಕಿ ಆರೋಪಿ ಕೆ.ಪಿ ಸುರೇಶ್ ಎಂಬಾತ  ಪಿ.ವಿ ರಾಜು, ರಾಜೇಶ್ ಮತ್ತು ವಿಜಯ್ ಕುಮಾರ್ ಎಂಬುವವರ ಜೊತೆ ಸೇರಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ 2010 ರ ಜುಲೈ 17 ರಂದು  ಉಡುಪಿಯ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ತೆರಳಿ ನಕಲಿ ವಿಳಾಸ ನೀಡಿ, 4 ಚಿನ್ನದ ಬಳೆಗಳನ್ನು ಅಡವಿರಿಸಿ 41,500 ರೂ. ಸಾಲ ಪಡೆದುಕೊಂಡಿದ್ದಾನೆ. ಇನ್ನುಳಿದ ಇಬ್ಬರು ರೋಪಿಗಳಾದ  ಪಿ.ವಿ ರಾಜು ಮತ್ತು  ರಾಜೇಶ್ ಇತರ ಆರೋಪಿಗಳ ಜೊತೆ ಸೇರಿ, ಉಡುಪಿಯ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 2010 ರ ಅಗಸ್ಟ್ 12 ರಂದು ನಕಲಿ ವಿಳಾಸ ನೀಡಿದ್ದಲ್ಲದೆ 6 ನಕಲಿ ಚಿನ್ನದ ಬಲೆಗಳನ್ನು ಅಡವಿರಿಸಿ 68,000 ರೂ ಸಾಲ ಪಡೆದಿರುತ್ತಾರೆ.

ಇದರ ಜೊತೆಗೆ    ಪಡುಬಿದ್ರೆಯ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಗೆ ತೆರಳಿ 2010  ರ ಸೆ.30  ರಂದು ನಕಲಿ ವಿಳಾಸ ನೀಡಿ ವಿಜಯ್ ಕುಮಾರ್ ಹೆಸರಿನಲ್ಲಿ  ಚಿನ್ನದ ಲೇಪನ ಇರುವ ಬಲೆಗಳನ್ನು ನೀಡಿ 45,000  ರೂ ವಂಚಿಸಿದ್ದಾರೆ. ಅಲ್ಲದೆ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ 2020 ರ ಅ.6ರಂದು ತೆರಳಿ ವಂಚಿಸಲು ಯತ್ನಿಸಿದ್ದರು ಈ ಎಲ್ಲಾ ಪ್ರಕರಣಗಳ ಬಗ್ಗೆ ಉಡುಪಿ ನಗರ ಠಾಣೆ ಹಾಗೂ ಪಡುಬಿದ್ರಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈ ಪೈಕಿ ಉಡುಪಿಯ ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗೆ ವಂಚಿಸಿರುವ ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್, ಆರೋಪಿ ಕೆ.ಪಿ ಸುರೇಶ್ ವಿರುದ್ಧದ ಆರೋಪವು ರುಜುವಾತಾಗಿದ ಹಿನ್ನೆಲೆ ಆರೋಪಿ ಕೆ ಪಿ ಸುುರೇಶ್ ಗೆ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ 1,000 ರೂ. ದಂಡ  ವಿಧಿಸಿರುತ್ತದೆ. ದಂಡ ಕಟ್ಟಲು ತಪ್ಪಿದಲ್ಲಿ 30 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ಫೆಬ್ರವರಿ 15 ರಂದು ತೀರ್ಪು ನೀಡಿದೆ.   

ಇನ್ನು  ಉಡುಪಿಯ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಿ.ವಿ ರಾಜು ಮತ್ತು 2 ನೇ  ರಾಜೇಶ್  ಆರೋಪ ಸಾಬೀತಾದ ಹಿನ್ನೆಲೆ ಈ ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್ ಅವರು ಪ್ರಕರಣದ ಪಿ.ವಿ ರಾಜು ಮತ್ತು ರಾಜೇಶ್ ವಿರುದ್ಧದ ಆರೋಪವು ರುಜುವಾತಾದ ಹಿನ್ನೆಲೆ ಈ ಆರೋಪಿಗಳಿಗೆ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ 1,000 ರೂ. ದಂಡ ರೂಪದ ಶಿಕ್ಷೆ ವಿಧಿಸಿರುತ್ತದೆ. ದಂಡ ಕಟ್ಟಲು ತಪ್ಪಿದಲ್ಲಿ 30 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ಫೆಬ್ರವರಿ 15 ರಂದು ತೀರ್ಪು ನೀಡಿದ್ದಾರೆ.

ಇದರ ಜೊತೆಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂದಿಸಿ ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್, ಈ ಪ್ರಕರಣದ ಪಿ.ವಿ ರಾಜು ಮತ್ತು ರಾಜೇಶ್ ವಿರುದ್ಧದ ಆರೋಪವು ರುಜುವಾತಾಗಿದ ಹಿನ್ನೆಲೆ ಆರೋಪಿಗಳಿಗೆ 1 ವರ್ಷ ಕಾರಾಗೃಹ ವಾಸ ಶಿಕ್ಷೆ ನೀಡಿ  ತೀರ್ಪು ನೀಡಿದೆ.

ಇದಲ್ಲದೆ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ವಂಚಿಸಿರುವ ಈ ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್, ಈ ಪ್ರಕರಣದ ಪಿ.ವಿ ರಾಜು ಮತ್ತು ರಾಜೇಶ್ ವಿರುದ್ಧದ ಆರೋಪವು ರುಜುವಾತಾಗಿದ್ದು, ಈ ಆರೋಪಿಗಳಿಗೆ 1 ವರ್ಷ ಕಾರಾಗೃಹ ವಾಸ ಶಿಕ್ಷೆ ನೀಡಿ ಫೆಬ್ರವರಿ 15 ರಂದು ತೀರ್ಪು ನೀಡಿರುತ್ತಾರೆ.

ಈ ಎಲ್ಲಾ ಪ್ರಕರಣ ಗಳಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ. ಕೆ ವಾದ ಮಂಡಿಸಿದ್ದು, ಕಾನೂನು ಅಧಿಕಾರಿ ಮುಮ್ತಾಜ್ ಸಾಕ್ಷಿ ವಿಚಾರಣೆ ನಿರ್ವಹಿಸಿದ್ದರು. 

Leave a Reply

Your email address will not be published. Required fields are marked *

error: Content is protected !!